ಮುಗಿಲಲ್ಲಿ ತೇಲಿಸಿದೆಯಾ?
ಇದೆಲ್ಲ ಭ್ರಮೆಯಾ?
ನನ್ನ ಮನ ನಿನ್ನ ದಾಳವೇ?
ಹಿಂಬಾಲಿಸುವ ನಾಯಿ?
ಪರಸ್ಪರ ಅನುಯಾಯಿ?
ನಗುವೂ, ಅಳುವೂ ಜೊತೆಗಾರರಾದರೆ
ಕತ್ತಲೆಯಿದೆಯೆಂದು ಬೆಳಕ ಮರೆಯಬಹುದೇ
ಸಮುದ್ರ ಮಾಋತಗಳ ಬೇರೆ ಮಾಡಬಹುದೇ
ಪಾತಾಳವೂ, ಮುಗಿಲೂ ನನ್ನಲ್ಲಿದೆ
ಏಳು ಬೀಳುಗಳಿವೆ
ನನ್ನೆದೆಯಲ್ಲೊಂದು ಬದುಕಿದೆ
ಅದಕ್ಕೇ ಅಳುತ್ತೇನೆ, ನಗುತ್ತೇನೆ
ಹೊಡೆದರೆ ಹೆದರಿ ಮೂಲೆ ಸೇರುತ್ತೇನೆ
ಮೂಲೆಯಲೇ ಕೂತು ರೆಕ್ಕೆಗಳಿಗೆ ಕಾಯುತ್ತೇನೆ
ನೀ ನನ್ನ ಏರಿಸಿ ಇಳಿಸಬಲ್ಲೆಯಾ?
ಅದೆಲ್ಲಾ ನಾನೇ ಇರಬೇಕು
ನನ್ನ ಮನದ ತಂತ್ರಗಳೇ ಇರಬೇಕು
ಭಾಶೇ
No comments:
Post a Comment