(Scroll down for English Version)
ಸೆಂಟರ್ ಫಾರ್ ಕಮ್ಯುನಿಟಿ ಡೈಲಾಗ್ ಅಂಡ್ ಚೇಂಜ್ (CCDC)
ಎ 6, ಗ್ರಾಸ್ಮಿಯರ್ ಅಪಾರ್ಟ್ಮೆಂಟ್ಸ್,
ಒಸ್ಬೊರ್ನ್ ರೋಡ್, ಬೆಂಗಳೂರು
ದೂರವಾಣಿ: 080 23692168
contact@ccdc.in
ಸೆಂಟರ್ ಫಾರ್ ಕಮ್ಯುನಿಟಿ ಡೈಲಾಗ್ ಅಂಡ್ ಚೇಂಜ್ ಭಾರತದಲ್ಲಿ ಮೊದಲಬಾರಿಗೆ ಡೇವಿಡ್ ಡೈಮಂಡರ "ಥಿಯೇಟರ್ ಫಾರ್ ಲಿವಿಂಗ್" ಕಾರ್ಯಾಗಾರವನ್ನು ಆಯೋಜಿಸಿದೆ.
ಸೆಂಟರ್ ಫಾರ್ ಕಮ್ಯುನಿಟಿ ಡೈಲಾಗ್ ಅಂಡ್ ಚೇಂಜ್ ಈ ಹೊಸವರ್ಷವನ್ನು ಅಂತಾರಾಷ್ಟ್ರೀಯ ಪ್ರಶಂಸೆಗೆ ಒಳಗಾಗಿರುವ ಡೇವಿಡ್ ಡೈಮಂಡ್ ಮತ್ತು ಅವರ ಥಿಯೇಟರ್ ಫಾರ್ ಲಿವಿಂಗ್ ಅನ್ನು ಬೆಂಗಳೂರಿಗೆ ತರುವ ಮೂಲಕ ಆಚರಿಸುತ್ತಿದೆ. 2014ರಲ್ಲಿ ಅತ್ಯಂತ ಯಶಸ್ವಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ "ಥಿಯೇಟರ್ ಆಫ್ ದಿ ಒಪ್ಪ್ರೆಸ್ಡ್" (TO) ಸಮ್ಮೇಳನ "ಡೈವರ್ಸಿಟಿ ಡೈಲಾಗ್" ಆಯೋಜಿಸಿದ ನಂತರ, CCDC, ಜನವರಿ 2 ರಿಂದ ಜನವರಿ 17, 2017 ರ ವರೆಗೆ ಡೇವಿಡ್ ಡೈಮಂಡರ ಮೂರು ಕಾರ್ಯಾಗಾರಗಳನ್ನು ಎದುರುನೋಡುತ್ತಿದೆ.
ಸೆಂಟರ್ ಫಾರ್ ಕಮ್ಯುನಿಟಿ ಡೈಲಾಗ್ ಅಂಡ್ ಚೇಂಜ್
CCDC ಬೆಂಗಳೂರಿನಲ್ಲಿ ಸ್ಥಾಪಿತವಾದ ಸಂಸ್ಥೆಯಾಗಿದ್ದು ಅದು "ಥಿಯೇಟರ್ ಆಫ್ ದಿ ಒಪ್ಪ್ರೆಸ್ಡ್" ಅನ್ನು ಪ್ರಚಾರಗೊಳಿಸುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಬದಲಾವಣೆಗಾಗಿ ಒಂದು ಸೃಜನಾತ್ಮಕ ಸಾಧನವಾಗಿ ಪ್ರಪಂಚದಾದ್ಯಂತ ಬಳಸಲಾಗುತ್ತಿರುವ "ಥಿಯೇಟರ್ ಆಫ್ ದಿ ಒಪ್ಪ್ರೆಸ್ಡ್", ಬ್ರೆಜಿಲಿಯನ್ ರಂಗಭೂಮಿ ನಿರ್ದೇಶಕ ಆಗಸ್ಟೊ ಬೊಆಲ್ ರವರಿಂದ ರಚಿಸಲ್ಪಟ್ಟಿದೆ. ಪೌಲೊ ಪ್ರೈಯರಿಯವರ "ಪೆಡಗೊಜಿ ಆಫ್ ದಿ ಒಪ್ಪ್ರೆಸ್ಡ್" ಪುಸ್ತಕದಲ್ಲಿರುವ ಕಲ್ಪನೆಗಳಿಂದ ಪ್ರೇರೇಪಿತಗೊಂಡ ರಂಗಭೂಮಿಯ ಆಟಗಳು ಮತ್ತು ಚಟುವಟಿಕೆಗಳ ಗುಂಪು ಇದಾಗಿದೆ. TO ಕಾರ್ಯಾಗಾರಗಳು ವ್ಯಕ್ತಿಗಳು ಮತ್ತು ಸಮುದಾಯಗಳು ತಮ್ಮನ್ನು ಮತ್ತು ಇತರರನ್ನು ರೂಪಾಂತರಗೊಳಿಸಲು ತಮ್ಮಲ್ಲಿ ಇರುವ ಸಾಮರ್ಥ್ಯವನ್ನು ಕಂಡುಕೊಳ್ಳಲು ಒಟ್ಟಿಗೆ ಬರಲು ಸಾಧ್ಯವಾಗುವ ಜಾಗವನ್ನು ಸೃಷ್ಟಿಸುತ್ತದೆ.
ನೀವು www.ccdc.in. ನಲ್ಲಿ CCDC ಬಗ್ಗೆ ಓದಬಹುದು.
ಡೇವಿಡ್ ಡೈಮಂಡ್ ಮತ್ತು ಥಿಯೇಟರ್ ಫಾರ್ ಲಿವಿಂಗ್
ಡೇವಿಡ್ ಡೈಮಂಡ್, ವ್ಯಾಂಕುವಾರ್ ನ ಥಿಯೇಟರ್ ಫಾರ್ ಲಿವಿಂಗ್ (TfL) (ಹಿಂದೆ ಹೆಡ್ಲೈನ್ಸ್ ಥಿಯೇಟರ್), ನ ಸಂಸ್ಥಾಪಕ ಮತ್ತು ಕಲಾತ್ಮಕ ನಿರ್ದೇಶಕರಾಗಿದ್ದಾರೆ. ರಂಗಭೂಮಿಯನ್ನು ಬಳಸಿಕೊಂಡು ಸಮುದಾಯಗಳು ತಮ್ಮ ಕಥೆಗಳನ್ನು ಹೇಳಲು ಥಿಯೇಟರ್ ಫಾರ್ ಲಿವಿಂಗ್ (TfL) ಸಹಾಯಮಾಡುತ್ತದೆ. TfL ಆಗಸ್ಟೊ ಬೊಆಲ್ ರ ಥಿಯೇಟರ್ ಆಫ್ ದಿ ಒಪ್ಪ್ರೆಸ್ಡ್ ಇಂದ ವಿಕಾಸಗೊಂಡಿದೆ. "ಪೀಡಕ / ತುಳಿತಕ್ಕೊಳಗಾದವರು" ಎಂಬ ಬೈನರಿ / ದ್ವಿಮುಖ ಭಾಷೆಯಿಂದ ದೂರಹೋಗಿ ಇದು ಕಲಾತ್ಮಕ ಅಭಿವ್ಯಕ್ತಿಗಳಿಗೆ ತಡೆ ಹಾಕಿದಾಗ ಉಂಟಾಗುವ ಸಾಮಾಜಿಕ ಅನಾರೋಗ್ಯವನ್ನು ನಿವಾರಿಸಲು ಅವಕಾಶ ಒದಗಿಸುತ್ತದೆ.
ನಾವು ನಮ್ಮ ದೈನಂದಿನ ಶಬ್ದಕೋಶವನ್ನು ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿ ಪುನಃ ಬಳಸಲಾರಂಬಿಸಿದರೆ - ನಾವು ನಮ್ಮ ಸಾಮೂಹಿಕ ಕಥೆಗಳು ಹೇಳಲು ಬಳಸುವ ಒಂದು ಸಾಮಾನ್ಯ ಭಾಷೆ - ನಾವು ವೈಯಕ್ತಿಕ ಮತ್ತು ಸಾಮಾಜಿಕ ಸಮತೋಲನದತ್ತ ಮುಂದುವರೆದಂತೆ.
ಡೇವಿಡ್ ಮೂಲನಿವಾಸಿಗಳು, ನಿರಾಶ್ರಿತರು, ಮಹಿಳಾ ಗುಂಪುಗಳು, ಪರಿಸರವಾದಿಗಳು, ರಸ್ತೆಯ ಯುವಜನ, ಆರೋಗ್ಯ ವೃತ್ತಿಗಾರರು ಮತ್ತು ನಿರಾಶ್ರಿತರು ಸೇರಿದಂತೆ ವಿಶ್ವದಾದ್ಯಂತ ಹಲವಾರು ಗುಂಪುಗಳ ಜೊತೆ ಕೆಲಸ ಮಾಡಿದ್ದಾರೆ.
ಅವರು ಕೆನಡಾ, USA ಮತ್ತು ಯುರೋಪ್, ನಮೀಬಿಯಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಬ್ರೆಜಿಲ್, ರುವಾಂಡಾ, ಪ್ಯಾಲೆಸ್ಟೈನ್ ಮತ್ತು ಸಿಂಗಾಪುರಗಳ ಉದ್ದಕ್ಕೂ ಕೆಲಸ ಮಾಡಿದ್ದಾರೆ, ಮತ್ತು ನೇರ, ಪರಸ್ಪರ ವೇದಿಕೆ, ದೂರದರ್ಶನ ಮತ್ತು ವೆಬ್ ಪ್ರಸಾರದ ಅಭಿವೃದ್ಧಿ ಪಡಿಸಿದ್ದಾರೆ.
ಡೇವಿಡ್ ಸಿಟಿ ವ್ಯಾಂಕೋವರ್ ಸಾಂಸ್ಕೃತಿಕ ಹಾರ್ಮನಿ ಪ್ರಶಸ್ತಿ, ಜೆಸ್ಸಿ ರಿಚರ್ಡ್ಸನ್ ರವರ ಇನ್ನೊವೇಷನ್ ಇನ್ ಥಿಯೇಟರ್ ಪ್ರಶಸ್ತಿ, ಫ಼್ರೇಸರ್ ವ್ಯಾಲಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಮತ್ತು ರಾಜಕೀಯ ರಂಗಕಲೆಗೆ ಒಟ್ಟೊ ರೆನೆ ಕ್ಯಾಸ್ಟಿಲ್ಲೊ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಡೇವಿಡ್ ಆಸ್ಟ್ರಿಯಾದ ಯೂನಿವರ್ಸಿಟಿ ಆಫ್ ಇನ್ಸ್ಬ್ರಕ್ ನಲ್ಲಿ ಯುನೆಸ್ಕೋ ದ ಶಾಂತಿ ಅಧ್ಯಯನಗಳ ಸ್ನಾತಕೋತ್ತರ ಕಲಾ ವಿಭಾಗದಲ್ಲಿ ಶಾಂತಿ, ಅಭಿವೃದ್ಧಿ, ಭದ್ರತೆ ಮತ್ತು ಅಂತರರಾಷ್ಟ್ರೀಯ ಕಾನ್ಫ್ಲಿಕ್ಟ್ ಟ್ರ್ಯಾನ್ಸ್ಫರ್ಮೇಷನ್ ಭೋದಿಸುವ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ. ಹಾಗೆಯೇ ಆಲ್ಬರ್ಟಾ ವಿಶ್ವವಿದ್ಯಾನಿಲಯದಲ್ಲಿ ಮೆಡಿಸಿನ್ ಮತ್ತು ಡೆಂಟಿಸ್ಟ್ರಿ ಯ ವಿಭಾಗದಲ್ಲಿ ಕೂಡ ಅಥಿತಿ ರಂಗನಿರ್ದೇಶಕರಾಗಿದ್ದಾರೆ.
TfL ಬಗ್ಗೆ ಹೆಚ್ಚಿನ ಮಾಹಿತಿಗಾಗಿ theatreforliving.com ಭೇಟಿ ನೀಡಿ.
ಬೆಂಗಳೂರಿನಲ್ಲಿ ಥಿಯೇಟರ್ ಫಾರ್ ಲಿವಿಂಗ್ (TfL) ಕಾರ್ಯಾಗಾರ
CCDC ಮತ್ತು ಡೇವಿಡ್ ಡೈಮಂಡ್ ಜನವರಿ 2 ಮತ್ತು ಜನವರಿ 17, 2017 ರ ನಡುವೆ ಒಟ್ಟು 15 ದಿನಗಳ ಮೂರು ಕಾರ್ಯಕ್ರಮಗಳನ್ನು ಒಟ್ಟಿಗೆ ನಡೆಸಿಕೊಡಲಿದ್ದಾರೆ:
Ø TfL ಒದಗಿಸುವ ತರಬೇತುದಾರ ತರಬೇತಿ, ಜನವರಿ 2 ರಿಂದ ಜನವರಿ 7, 2017: ಥಿಯೇಟರ್ ಫಾರ್ ಲಿವಿಂಗ್ ನಲ್ಲಿ ಒಂದು ವಾರಾವಧಿಯ ತರಬೇತಿ. 30 ಭಾರತೀಯ ಹಾಗೂ ವಿದೇಶೀ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
Ø 2 ಡಿಗ್ರೀಯ ಭಯ ಮತ್ತು ಬಯಕೆ, ಜನವರಿ 10, 2017: ಕಾಪ್ ಇನ್ ದ ಹೆಡ್ ತಂತ್ರ ಬಳಸಿಕೊಂಡು ಜಾಗತಿಕ ತಾಪಮಾನ ಏರಿಕೆಯ ಮೇಲೆ 1 ದಿನದ ಕಾರ್ಯಾಗಾರ.
Ø ಅಂಡರ್ ದಿ ಸ್ಪಾಟ್ಲೈಟ್ - ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ರಂಗಭೂಮಿ ಆಧಾರಿತ ಪರಿಶೋಧನೆ, ಜನವರಿ 12-17: ಡಾ ಆರ್.ಎನ್. ಮೂರ್ತಿ ಫೌಂಡೇಶನ್ NIMHANSನ ಬೆಂಬಲದೊಂದಿಗೆ NIMHANSನ ಕ್ಲಿನಿಕಲ್ ಸೈಕಾಲಜಿ ಇಲಾಖೆ ಜೊತೆ CCDC ಸಹ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಆಮಂತ್ರಣದ ಮೂಲಕ ಮಾತ್ರ ಭಾಗವಹಿಸಬಹುದು. 6 ದಿನದ ಈ ಕಾರ್ಯಾಗಾರ ಜನವರಿ 17, 2017 ರಂದು ಒಂದು ಸಂವಾದಾತ್ಮಕ ಸಾರ್ವಜನಿಕ ಫೋರಮ್ ಥಿಯೇಟರ್ ಪ್ರದರ್ಶನದೊಂದಿಗೆ ಕೊನೆಗೊಳ್ಳಲಿದೆ. ಈ ಫೋರಮ್ ಪ್ರದರ್ಶನಕ್ಕೆ ಎಲ್ಲರಿಗೂ ಆಹ್ವಾನವಿದೆ.
ನೋಂದಣಿ ಬಗ್ಗೆ ವಿವರಗಳಿಗಾಗಿ ದಯವಿಟ್ಟು ಲಾಗ್ ಆನ್ ಮಾಡಿ http://www.ccdc.in/theatre-for-living-workshops
"ಥಿಯೇಟರ್ ಫಾರ್ ಲಿವಿಂಗ್ ನ ಭಾಷೆ, ಬೆಂಗಳೂರಿನ ಜನರು ಮತ್ತು ಸಂಸ್ಕೃತಿಯನ್ನು ಭೇಟಿಮಾಡಿದಾಗ ಆಗಬಹುದಾದ ರೂಪಾಂತರಕ್ಕೆ" ಡೇವಿಡ್ ಡೈಮಂಡ್ ಎದುರುನೋಡುತ್ತಿದ್ದಾರೆ. "ಪರಿವರ್ತನೆಯ ಸಂಭಾಷಣೆ ಉತ್ತೇಜಿಸುವ ಯಾವ ರೀತಿಯ ಪ್ರಶ್ನೆಗಳನ್ನು ನಾವು ಒಂದು ಒಟ್ಟಿಗೆ ಕೇಳಬಹುದು? "
CCDC ಸ್ಥಾಪಕ ಟ್ರಸ್ಟಿ ರಾಧಾ ರಾಮಸ್ವಾಮಿ ಹೇಳುತ್ತಾರೆ, "ಮುಂದಿನ 15 ದಿನಗಳು ವಿಶಿಷ್ಟವಾದ ಕಲಿಕೆಯ ಅವಕಾಶವಾಗಿದೆ. ಭಾರತ ಹಾಗೂ ವಿದೇಶದ 30 ಜನರು ಡೇವಿಡ್ ಡೈಮಂಡ್ ರಿಂದಲೇ TfLನ ಭಾಷೆ ಕಲಿಯಲಿದ್ದಾರೆ. CCDC ಮಾನಸಿಕ ಆರೋಗ್ಯದ ಬಗ್ಗೆ ಅರ್ಥಪೂರ್ಣ ಸಂಭಾಷಣೆ ನಡೆಸುವ ಕೆಲಸ ಮಾಡುತ್ತಿದೆ. ಹಾಗಾಗಿ ಅದು TfL ಈ ಕ್ರಿಯೆಯಲ್ಲಿ ಹೇಗೆ ಸಹಾಯ ಮಾಡಬಹುದು ಎಂದು ಕಲಿಯಲು ಕಾತುರವಾಗಿದೆ.
Centre for Community Dialogue and Change
A 6, Grasmere Apartments,
Osborne Road, Bangalore 560042
India
Tel: 080 23692168
contact@ccdc.in
Centre for Community Dialogue and Change brings to India
Workshops in Theatre for Living by David Diamond.
Centre for Community Dialogue and Change (CCDC), Bangalore, ushers in the New Year with yet another powerful theatre extravaganza, bringing the internationally acclaimed theatre facilitator David Diamond and his Theatre for Living to Bangalore. After hosting a highly successful national level Theatre of the Oppressed conference, Diversity Dialogues, in 2014, CCDC is back with a set of three workshops facilitated by David Diamond, from January 2 to January 17, 2017.
Centre for Community Dialogue and Change
CCDC is a Bangalore,India based organization promoting Theatre of the Oppressed. Used the world over as a creative tool for personal and social transformation, Theatre of the Oppressed was created by Brazilian theatre director Augusto Boal. It is a set of theatre games and exercises inspired by the ideas of the educationist, Paulo Freire, as articulated in his book, Pedagogy of the Oppressed. TO workshops create a space where individuals and communities come together to realise their potential to transform themselves and others.
You can read more about CCDC at www.ccdc.in
David Diamond and Theatre for Living
David Diamond is the founder and artistic director of Vancouver's Theatre for Living (formerly Headlines Theatre), which uses theatre to help communities tell their stories. Theatre for Living (Tfl) has evolved from Augusto Boal's Theatre of the Oppressed - moving away from the binary language and model of "oppressor/oppressed", it approaches community-based cultural work from a systems-based perspective. If we can reclaim cultural expression as part of our everyday vocabulary – a common language that we use to tell our own collective stories – we are one step closer to being balanced as individuals and as communities.
David has worked with many groups around the world including First Nations, refugees, women's groups, environmentalists, street youth, health practitioners, and people who are homeless. He has worked throughout Canada, the USA and Europe, besides Namibia, New Zealand, Australia, Brazil, Rwanda, Palestine and Singapore, and has pioneered the development of live, interactive Forum television and web casting.
David is the recipient of numerous awards, including the City of Vancouver's Cultural Harmony
Award, the Jessie Richardson Award for Innovation in Theatre, an Honorary Doctorate from the
University of the Fraser Valley and the Otto René Castillo Award for Political Theatre.
David is a Visiting Faculty Member at the Master of Arts Program in Peace, Development, Security and International Conflict Transformation at the UNESCO Chair for Peace Studies, University of Innsbruck, Austria, and Visiting Theatre Director at the Faculty of Medicine and Dentistry, University of Alberta.
For more on Tfl please visit theatreforliving.com
The Theatre for Living (TfL) workshops in Bangalore, India.
CCDC and David Diamond will come together for 15 days between January 2 and January 17, 2017 with three programmes:
The TfL Facilitator Training, January 2 to January 7, 2017 : a weeklong training in Theatre for Living for 30 participants from across India and abroad.
2 Degrees of Fear and Desire, January 10, 2017 : a 1-day workshop on global warming using the Cop in the Head theatrical exercise.
Under the Spotlight - An Exploration of Mental Health Issues, January 12-17 : co-organised by CCDC with the Department of Clinical Psychology, NIMHANS, with support from Dr RN Moorthy Foundation, NIMHANS. Participation in this workshop is by invitation only. The intensive 6-day workshop will culminate in an interactive public Forum Theatre performance by the participants on January 17, 2017.
For details regarding registration please log on to: http://www.ccdc.in/theatre-for-living-workshops
David Diamond is "Looking forward to seeing how the language of Theatre for Living transforms as it encounters the people and culture in Bangalore. What kind of questions can we ask together that stimulate a transformational dialogue? "
“The next 15 days offer exciting learning opportunities" says Radha Ramaswamy, Founder Trustee of CCDC, “30 people from across India will learn the language of TfL from David Diamond himself. We are also looking forward to learning how TfL can help create meaningful dialogues around mental health, an area that CCDC is strongly committed to.”