ಸಂಯುಕ್ತಾ ಪುಲಿಗಲ್ ರ ಪರ್ವತದಲ್ಲಿ ಪವಾಡ ಓದಿ ಕೆಳಗಿಟ್ಟಿದ್ದೇನೆ. ನೆನ್ನೆಗೆ ಮುಗಿಯಿತು. ಇಂದು ಏನೋ ಖಾಲಿತನ. ಎರೆಡು ದಿನ ಎಡೆಬಿಡದೆ, ಬಿಡುವಾದಾಗಲೆಲ್ಲಾ ಓದಿದರ ಪರಿಣಾಮ.
ಆಂಡೀಸ್ ಶ್ರೇಣಿಯ ಮೌನಕ್ಕೆ ಮನಸ್ಸು ಹಾತೊರೆಯುತ್ತಿದೆ. ಅವರು ಬದುಕಿರದಿದ್ದಲ್ಲಿ ಈ ಪುಸ್ತಕ ಬರೆಯುತ್ತಿರಲಿಲ್ಲ, ಹಾಗಾಗಿ, ನ್ಯಾಂಡೋ ಬದುಕಿದರು ಎಂದು ಗೊತ್ತಿದ್ದರೂ, ಹೇಗೆ ಎಂದರಿಯುವ ಕುತೂಹಲದಿ ಬಿಟ್ಟೂ ಬಿಡದೆ ಓದಿಸಿದ ಪುಸ್ತಕ ಈಗ ಕೈಬಿಟ್ಟು ಮೇಜು ಸೇರಿದೆ. ಮನಸು ಖಾಲಿ ಖಾಲಿ.
ತಾನು ಓದಲು ಶುರು ಮಾಡಿದಾಗ ಕೈಬಿಡಲಾಗಲಿಲ್ಲ ಎಂದಳು ಸಂ. ಪು. ಹಾಗೇ ಭಟ್ಟಿ ಇಳಿಸಿದ್ದಾಳೆ ಕನ್ನಡಕ್ಕೆ. ಅದು ಹೇಗೆ ಅನುವಾದಿಸಿದಳೂ, ಗೊತ್ತಿಲ್ಲ!
ಪುಸ್ತಕ ಗಟ್ಟಿ ಹಿಡಿತ ಹೊಂದಿದೆ. ಕಡೆಯವರೆಗೂ ಒಂದೂ ಶಬ್ದವನ್ನು, ಅನುಚಿತವಾಗಿ, ಅನಾವಶ್ಯಕವಾಗಿ ಬರೆಯಲಾಗಿಲ್ಲ. ಗಟ್ಟಿಯಾದ ಕಥೆ, ಬೇಸರಕ್ಕೆ ಆಸ್ಪದ ಕೊಡದೆ ಓದಿಸಿಕೊಂಡು ಹೋಗುತ್ತದೆ.
ಅನುವಾದ, ಒಂದು ಭಾಷೆಗೆ ಹೊಚ್ಚ ಹೊಸ ಯೋಚನೆಗಳನ್ನು ತರುವ ಸಾಧನ. ನಮ್ಮಲ್ಲಿ ಯಾರದರೂ ಆಂಡೀಸ್ ಪರ್ವತಗಳಲ್ಲಿ ಕಳೆದು ಹೋಗುವ ಸಾಧ್ಯತೆ, ಬಹಳ ಕಡಿಮೆ. ಹಾಗಂತ ಆ ಅನುಭವವನ್ನು ನಮ್ಮ ಭಾಷೆಯಲ್ಲಿ ಓದಲಾಗದು/ಓದಬಾರದು ಎಂತೇನೂ ಇಲ್ಲವಲ್ಲ?
ಅನುವಾದ ಹಾಗೆಯೇ, ಬರೆಯುವ ವಿಧಾನ, ಭಾಷೆಯ ಬಳಕೆ, ಉಪಯೋಗಕ್ಕೂ ನವೀನತೆಯನ್ನು ತರುತ್ತದೆ. ಭಾವನೆಗಳ ಬಗ್ಗೆ ಬರೆಯುವ, ಭಾವನೆಗಳನ್ನು ಬಳಸುವ ರೀತಿ ಭಾಷ್ಯಾನುಸಾರ ಬದಲಾಗುತ್ತದೆ. ಅನುವಾದ, ಈ ಹೊಸ ರೀತಿಗಳನ್ನು ಅರಿಯಲು ಸಹಾಯ ಮಾಡುತ್ತದೆ.
ಕನ್ನಡಕ್ಕೆ ಬಂದಿರುವ ನ್ಯಾಂಡೋರವರ ಪುಸ್ತಕ ಅವರ ಸಾಹಸ, ಬದುಕು ಸಾವಿನ ನಡುವಿನ ಹೋರಾಟ ಮತ್ತು ಛಲವನ್ನಷ್ಟೇ ಅಲ್ಲದೆ, ಅವರ ಭಾವನೆಗಳ ಹರಿವು, ಭಾಷೆಯನ್ನು ಬಳಸುವ ವಿಧಾನ, ಮತ್ತು ಯೋಚನಾಲಹರಿಯನ್ನೂ ಅರಿಯಲು ಸಹಾಯ ಮಾಡುತ್ತದೆ. ಅನುವಾದದ ಉದ್ದೇಶವನ್ನು ಅನುವಾದಕರ ದೃಷ್ಟಿ ಮಾತ್ರ ನಿರ್ಧರಿಸಲು ಸಾಧ್ಯ. ಓದುಗರಿಗೆ ಆ ಸವಿಯನ್ನು ಸವಿಯಲು ಮಾತ್ರ ಅವಕಾಶ.
ಉತ್ತಮ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಕ್ಕೆ, ಗೆಳತಿ ಸಂಯುಕ್ತಾಳಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಭಾಶೆ