ನಡೆವೆನೆಂಬ ಪಥಿಕನೇ,
ಈಜು ಬರುವುದೇನು?
ಸಾಗರದ
ವಿಳಾಸ ಅರಿತಿರುವೆಯೇನು?
ಹಸಿವು, ನೋವು, ಹೆದರಿಕೆಗಳ
ಸೆಣೆಸಿ ಗೆಲುವೆಯೇನು?
ಕಾಡು, ಜಿಗ್ಗು, ಕೊರಕಲುಗಳಲೂ
ಜೊತೆಗೆ ಬರುವೆಯೇನು?
ಬಿರುಮಳೆಯ ಪ್ರವಾಹದಲ್ಲಿ
ಬದುಕಿ ಉಳಿಯುವೇನು?
ಹಲವು ತೊರೆಗಳ್ಬಂದು ಕೂಡೆ
ಪಥವು ಮರೆಯದೇನು?
ಸಾಗರಕ್ಕೆ ಹೊರಟವಳಿಗೆ
ನಿನ್ನ ಜೊತೆ, ಅದೇನು?
ಸಾಗರದಿ ಸೇರಿಹೋಗೆ
ನಿನ್ನ ಗುರಿಯು ಏನು?
ಭಾಶೇ!