"ದೇವರಿಗೆಲ್ಲಿದೆ ಸ್ವಾತಂತ್ರ"
ಗರ್ಭಗುಡಿಯೊಳಗೆ ಬಂಧಿಯಾಗಿ
ಕೊಡುವ ಅಲ್ಪ ನೈವೇದ್ಯಕ್ಕೆ ತೃಪ್ತನಾಗಿ
ಮಲಗಲೂ ಆಗದೆ, ಕೂರಲೂ ಆಗದೆ
ನಿಲ್ಲುವ ದೇವರಿಗೆಲ್ಲಿದೆ ಸ್ವಾತಂತ್ರ
ನಾವು ಮಾಡಿದಾಗ ಪೂಜೆ ಮಂಗಳಾರತಿ
ಇಲ್ಲದಿದ್ದರೆ ಗರ್ಭಗುಡಿಯ ಅದೇ ಹಳೇ ಉಸಿರು
ಜಿರಳೆ, ಇಲಿ, ಕ್ರಿಮಿಗಳೊಡನೆ ವಾಸ
ಗರ್ಭಗುಡಿಗೊಂದು ಕಿಟಕಿಯೂ ಇಲ್ಲ
ಯೋಚಿಸಲು ಹಲವಾರು ಚಿಂತೆಗಳು
ಯಾವಾಗಲೂ ಕಿವಿಯಾಗಿರಬೇಕಾದ ಅನಿವಾರ್ಯತೆ
ತಮ್ಮ ಬವಣೆಗಳ ನಿನಗೊಪ್ಪಿಸಿ
ನಿಂತು ನೋಡುವ ಜನರು
ಸ್ತ್ರೀಯನ್ನು ಉಬ್ಬಿಸಿ ಏರಿಸಿಬಿಟ್ಟಿದ್ದಾರೆ
"ಸ್ತ್ರೀ ದೇವತೆ"
ಅವಳಿಗೂ ಇಲ್ಲ ಸ್ವಾತಂತ್ರ
ಗಂಡನ ಅಡುಗೆ ಮನೆಯ ಬಂಧಿಯವಳು
ಕೊಡಿಸುವ ಮೂರು ಕಾಸಿನ ಸೀರೆ
ಹುಟ್ಟುವ ಹತ್ತು ಮಕ್ಕಳೊಡನೆ
ಮನೆಗೆಲಸದ ಹೊರೆ ಹೊತ್ತವಳಿಗೆ
ಅತ್ತೆ ಮನೆಯವರ ಪೂಜೆ, ಮಂಗಳಾರತಿ
ಹೆಣ್ಣೇ, ನೀ ದೇವರಾಗಬೇಡ
ಗಂಡು ಮನುಷ್ಯನ ಸಮಾಜಕ್ಕೆ ಬಾ
ನಿನಗಿರುವ ಪಟ್ಟಗಳ ಕಿತ್ತೆಸೆದು
ದೈವತ್ವದ ಬಂಧನ ದೇವರಿಗಷ್ಟೇ ಇರಲಿ
ಭಾಶೇ
I wrote this poem sometime in 2002. After coming to a bigger city like Bangalore and after 8 years, when I read it, I get a question is this still relevant? It may still be relevant and I might not have been looking at that part of the society anymore!
Hope you enjoy reading it.
9 comments:
Dinakar Sir!
Nimagaagi! :)
BhaShe
ಹೆನ್ನಿಗಿಲ್ಲ ಸ್ವಾತಂತ್ರ್ಯ,ಒಪ್ಪೋಣ..
ಆದರೆ ದೇವರಿಗೆ ಇಲ್ಲವೇ..??
೧. ಕುಳಿತಿರುವ ದೇವರನ್ನು ನೋಡಿಲ್ಲವೇ..?
೨.ದೇವರು ಬೇಕೆಂದಾಗ ಗರ್ಭಗುಡಿ ಬಿಟ್ಟು ಬಂದಿರುತ್ತಾನೆ..
ಅಪರೂಪಕ್ಕೆ ಕನ್ನಡ ಪೋಸ್ಟ್ ನೋಡಿ ಖುಷಿಯಾಯಿತು..
ದೇವರಿಗೆ ಇದೆಯಾ ಸ್ವಾತಂತ್ರ?
ಇಂದಿನ ಭ್ರಷ್ಟ ಪರಿಸರ ನೋಡಿದರೆ ದೇವರೂ ಯಾರದೋ ಭಕ್ಷಿಸಿನ ಬಂಧಿ ಅನ್ನಿಸುತ್ತಿದೆ.
ನನ್ನದು ಕನಿಷ್ಠ ೧೫೦ ಕನ್ನಡ ಕವನಗಳಿವೆ. ಬರೆದು ಹಾಕಲಾರದ ಸೋಮಾರಿತನ. ಈಚೆಗೆ ಇಂಗ್ಲಿಷ್ ಪ್ರಭಾವ ಜಾಸ್ತಿ ಆಗಿ ಕನ್ನಡ ಬರವಣಿಗೆ ಕುಂಟಿಹೋಗಿದೆ. :(
ತುಂಬಾ ತುಂಬಾ ಧನ್ಯವಾದ.... ತುಂಬಾ ಚೆನ್ನಾಗಿದೆ..... ಸುಮ್ಮನೆ ಬರೆದಿಟ್ಟ ಕನ್ನಡ ಕವನಗಳಿಗೆ ಮುಕ್ತಿ ಕೊಡಿ.... ತುಂಬಾ ಚೆನ್ನಾಗಿದೆ ಕವನ..... ಇದನ್ನ ಓದಿ ನನಗೊಂದು ಕವನ ಕೈ ಕಚ್ಚುತ್ತಿದೆ....
ಚೆನ್ನಾಗಿದೆ. 2002 ರಲ್ಲಿ ಬರೆದದ್ದು ಇ೦ದಿಗೂ ಪ್ರಸ್ತುತ ಅನಿಸುತ್ತೆ. ಕವನದ ವಸ್ತು ಚಿಂತನೆಗೆ ಹಚ್ಚುವ೦ತಿದೆ
ಹಾಗೆಕಂತೀರ..?
ದೇವರೆನೂ ಯಾರ ಬಂಧಿಯೂ ಅಲ್ಲ..
ಎಲ್ಲರು ಮಾಡೋ ಎಲ್ಲ ಕೆಲಸಗಳನ್ನು ಮೇಲಿನಿಂದಲೇ ನೋಡ್ತಾ ಇದಾನೆ..
ನೋಡ್ತಾ ಇರಿ.. ಇವರ ಆತ ಅತಿಯಾದರೆ ಆ ದೇವರೇ ಮೇಲಿಂದ ಇಳಿದುಬಂದು ಅವರನ್ನು ತುಳಿದು ಪಾತಾಳಕ್ಕೆ ಕಳಿಸ್ತಾನೆ..
Bhasheyavre.. really superb kanri.. after long time you have posted something in kannada & its awesome in its comparision of woman & god.. Liked it very much!
nice ...
i liked it very much....!!
i hope u publish ur remaining poetry in kannada........
i'll be waiting fr ur next poetry
Post a Comment