Wednesday, November 30, 2011

Pink Ipe - ಮಧುರ ಮರ

Pink Ipe

Dried from root to tip
With looks like a dead tree
In the midst of cold windy winter
Has blossomed and flowered suddenly
Bunches of lovely pink flowers all over

Just to do the duty of flowering
To make sure windy days spread its seeds
It has flowered on time, like every time
Reminding us of our duties and timelines
Teaching us many lessons of life

It says it is natural to dry up
To look dead at some point in life
But all the looks dead may not be dead
The life inside would come out one beautiful morning
Time can bring back life, to a dead looking tree

It also says never lose hope in life
Life can blossom and flower at unpredicted times
It can get colorful at unexpected situations
It can bring up a smile in dark
The chirping birds can sing a new song

Truth is not always what one sees
It is also not only one can see
It is also not constant throughout
Life changes always, for better or for worse
Fun is in living life, attached still detached.

BhaShe

Same thought in Kannada below!
Which one you like the most? Please let me know.

ಮಧುರ ಮರ

ಬುಡದಿಂದ ತುದಿಯವರೆಗೂ ಒಣಗಿ
ಜೀವವೇ ಇಲ್ಲವೇನೂ ಎಂಬಂತೆ ನಿಂತು
ಛಳಿಗಾಲ ಶುರುವಿನಲಿ, ಮೈಬಿರಿದಿರುವಾಗ
ಮಧುರ ಬಣ್ಣದ ಹೂ ಗೊಂಚಲುಗಳ
ಒಣ ರೆಂಬೆಗಳ ತುದಿಯಲೇ ಬಿಡುತ್ತದೆ ಆ ಮರ

ಮರುವರ್ಷದ ಬೀಜ ಪ್ರಸಾರಣದ
ಜವಾಬ್ದಾರಿ ಹೊತ್ತ ಗಾಳಿಗೆ, ಸಮಯಕ್ಕೆ ಸರಿಯಾಗಿ
ಕೆಲಸ ಕೊಡುವ ಕಾರ್ಯ ಹೊತ್ತು ಹೂ ಬಿಟ್ಟಿದೆ
ಕಾಲಕ್ಕೆ ತಕ್ಕಂತೆ ತನ್ನ ಕಾರ್ಯ ನಿರ್ವಹಿಸುತ್ತಾ
ನೆನ್ನೆ, ಇಂದು, ನಾಳೆಗಳ ಯೋಚನೆ ಬಿಟ್ಟಂತಿದೆ

ಮಳೆ, ಛಳಿ, ಗಾಳಿ, ಬಿಸಿಲು, ಏನಾದರೂ ಹೂ ಬಿಟ್ಟು
ಹೇಳಿದೆ ಹಲವು ಜೀವನ ಪಾಠಗಳ
ಸತ್ತಂತೆ ಕಂಡಿದ್ದೆಲ್ಲವೂ ಸತ್ತಿಲ್ಲ, ಜೀವವಿರಬಹುದು
ಕಾಲನೇ ಅದರಲ್ಲಿ ಜೀವ ತುಂಬಬಹುದು ಒಂದುದಿನ
ಕರ್ತವ್ಯ ನಿರ್ವಹಿಸು, ಬದುಕು ಅಂಟಿಯೂ ಅಂಟದಂತೆ

ಹೂವೊಂದು ಆರಳಬಹುದು ನಿನಗೇ ಅರಿವಿಲ್ಲದೆ
ನಗುವೊಂದು ನಲಿಯಬಹುದು, ನಿನ್ನ ಮನದಂಗಳದಲೇ
ಹಕ್ಕಿ ಹೊಸತೊಂದು ಹಾಡು ಹಾಡಿ ಮತ್ತೆ ಗೂಡು ಕಟ್ಟಬಹುದು
ಕಣ್ಣಿಗೆ ಕಂಡಿದ್ದಷ್ಟೇ, ಕಂಡಿದ್ದೆಲ್ಲವೂ ಸತ್ಯವಲ್ಲ
ಸತ್ಯ ನಿಶ್ಚಿತವೂ ಅಲ್ಲ, ನೀನಾಗೇ ಇರು, ಬದಲಾಗುತಿರು ಬಾಳಲಿ.

ಭಾಶೆ

3 comments:

Rajendra said...

Nice. I like it. Especially the attached yet detached part.

ದಿನಕರ ಮೊಗೇರ said...

kannada...
ishta aaytu.....

kannaDa dallu baritaa iri.........

Swarna said...

ಕನ್ನಡದ್ದು ಚೆನ್ನಾಗಿದೆ :)
ಬರೀತಿರಿ
ಸ್ವರ್ಣ