Sunday, January 5, 2014

ಕನಸಲ್ಲಿ ಕಡಲೆಗಿಡ

ಛಳಿಗಾಲ
ಅವರೆಯ ಸೊಗಡಿನೊಂದಿಗೆ, ಕಡಲೆಯ ಗಿಡವನೂ ತಂತು
ನಾನು
ಅವರೆಯ ಅನುಭವಿಸಿ ಕಡಲೆ ಗಿಡಕ್ಕೆ ಹುಡುಕಾಡಿದೆ

ಖಾಲಿಯಾಗಿ ಒಣಗಿ ರಸ್ತೆಯಲಿ ಧೂಳಾಗಿದ್ದ ಕಂಡಾಗ
ಹುಡುಕಲಾರಂಬಿಸುತ್ತೆ ನನ್ನ ಕಣ್ಣುಗಳು
ಯಾರಾದರೂ ಕೈಲಿ ಹಿಡಿದಿರುವುದು ಕಾಣಿಸಿದರಂತೂ
ಹೋಗಿ ಕೇಳಿ ಬಿಡಲೇ ಎಲ್ಲಿ ಕೊಂಡಿರೆಂದು?

ಕನಸಿನಲ್ಲೂ ಕಡಲೆ ಗಿಡವೇ ನನ್ನ ಭಾಗ್ಯಕ್ಕೆ?
ಮಾರಲೊಲ್ಲದ ವ್ಯಾಪಾರಿ, ಬಿಡಲೊಲ್ಲದ ನಾನು
ಆ ರುಚಿಗಾಗಿ ಎಷ್ಟು ಹಾತೊರೆಯುತ್ತಿದೆ ಮನ
ಎಲ್ಲಿರುವೆ, ಎಲ್ಲಿರುವೆ, ಮನವ ಕಾಡುವ ಕಡಲೆ ಗಿಡವೇ?

ಒಂದು ಕಟ್ಟು, ಅರ್ಧ ಕೇಜಿ, ಸಿಕ್ಕರೆ ಸಾಕೀಗ ನನಗೆ
ಒಂದು ವರ್ಷದ ತನಕ ಖುಷಿಯಗಿರುವೆ
ನಿಮಗೆ ಸಿಕ್ಕರೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ದೇವರೇ
ಹಸಿ ಕಡಲೆ ಕಾಳಿನ ರುಚಿಗೆ ಮನ ಕಾದು ಕಾವಲಿಯಾಗಿದೆ

ಭಾಶೇ

1 comment:

Badarinath Palavalli said...

ಮೊನ್ನೆ ನಮ್ಮ ಮಾವನವರು ಊರಿನಿಂದ ಬಂದಾಗ ಮೂರು ನಾಲ್ಕು ಕಟ್ಟು ಹಸಿ ಕಡಲೆ ಗಿಡ ತಂದಿದ್ದರು, ಅದು ನನ್ನ ಮಡದಿಗೆ ತುಂಬಾ ಇಷ್ಟ.
ಇಂದಿನ ಜಾಗತಿಕ ರಭಸದಲ್ಲಿ ಮರೆಯಾಗುತ್ತಿರುವ ನಮ್ಮದೇ ನೆಲದ ರುಚಿಗಳು ಮತ್ತು ತಮ್ಮ ಲಾಭದ ದೃಷ್ಟಿಯಿಂದ ನಮ್ಮ ನಾಲಿಗೆ ಒಗ್ಗಿಸುವ ವ್ಯಾಪಾರೀಕರಣ ವ್ಯವಸ್ಥೆ ಇಂದಿನ ನಿಜವಾದ ದುರಂತ!