Sunday, April 15, 2018

ಹೆಣ್ಣು ಮನುಷ್ಯಳಲ್ಲ - Women are not humans

ಹೆಣ್ಣು ಮನುಷ್ಯಳಲ್ಲ
ಯೋನಿಯೊಂದಿಗೆ ಹುಟ್ಟಿದ ಒಂದೇ ಕಾರಣಕ್ಕೆ
ಬದುಕು ಪಂಜರವಾಗಿ
ಅತ್ಯಾಚಾರವೇ ಹಾಡಾಗಿ
ದಿನಾ ಸಾಯುವ ಹೆಣ್ಣು ಮನುಷ್ಯಳಲ್ಲ

ಮನೆಯ ಗೌರವ, ಜಾತಿಯ ಗೌರವ
ಹೆಚ್ಚಾದರೆ ಹಳ್ಳಿ, ತಾಲ್ಲೂಕು, ಜಿಲ್ಲೆಯದ್ದೂ
ಎಲ್ಲ ಗೌರವವ ಅವಳ ಯೋನಿಯಲಿಟ್ಟು
ಹೆದರುತ್ತಲೇ ಓಡಾಡಬೇಕಾಗಿರುವ
ಹೆಣ್ಣು ಮನುಷ್ಯಳಲ್ಲ

ಹೆಣ್ಣು ಪ್ರ‍ಾಣಿಯೂ ಅಲ್ಲ
ಕುರಿ, ಕೋಳಿ ಕಡಿಯುವಾಗ
ಅದರ ಲಿಂಗ ನೋಡುವುದಿಲ್ಲ
ಯೋನಿಗೆ ಕಬ್ಬಿಣ ತುರುಕುವುದಿಲ್ಲ
ದಿನಗಟ್ಟಲೆ ಬಂಧಿಸಿ ಅತ್ಯಾಚಾರ ಮಾಡುವುದಿಲ್ಲ
ಹಸುವಿನ ಮಾತಂತೂ ಬಿಟ್ಟೇಬಿಡಿ
ಕೊಂದರೆ ಸಾವು ಕಾದಿದ್ದೇ
ಕೆಲವೊಮ್ಮೆ, ಕೊಲ್ಲದಿದ್ದರೂ
"ಗೋ ರಕ್ಷಣೆ"ಯಿದೆ, ಸ್ತ್ರೀಗಿಲ್ಲ
ಹೆಣ್ಣು ಮನುಷ್ಯಳಲ್ಲ

ಹೆಣ್ಣು ಮರ, ಗಿಡವೂ ಅಲ್ಲ
ಕಾಡು ಕಡಿದರೆ ಜೈಲು
ಲಿಂಗ ತಾರತಮ್ಯವಿಲ್ಲ
ಗ್ಲೊಬಲ್ ವಾರ್ಮಿಂಗ್
ಎಲ್ಲರಿಗೂ ಗೊತ್ತಿರುವ ಸತ್ಯ
ಹೆಣ್ಣು ಮನುಷ್ಯಳಲ್ಲ
ಪ್ರಾಣಿಯೂ, ಮರ ಗಿಡವೂ ಅಲ್ಲ

ಗಂಡಿನ ಶಿಶ್ನಕ್ಕೆ ಹೆದರುತ್ತಾ
ಯೋನಿಯ ಇರುವಿಕೆಗೆ ಬೆದರುತ್ತಾ
ಹುಟ್ಟಿನಿಂದ ಸಾಯುವವರೆಗೆ
ತನ್ನ ಇರುವನ್ನೇ ಮುಚ್ಚಿಟ್ಟು ಬದುಕುತ್ತಾ
ಸುಲಭಕ್ಕೆ "ಮರ್ಯಾದೆ" ತೆಗೆಯಬಹುದಾದ
ಸುಲಭಕ್ಕೆ ಸಾಯಬಹುದಾದ
ಹೆಣ್ಣು ಮನುಷ್ಯಳಲ್ಲ

ಅವಳು ವಸ್ತುವಾ? ಆಯುಧವಾ? ಅಥವಾ ಏನೂ ಅಲ್ಲವಾ?

ಹೆಣ್ಣನ್ನು ಈ ಮಟ್ಟಕ್ಕೆ ಇಳಿಸಿರುವ
ಮತ್ತೆಲ್ಲರೂ, ಈ ಸಮಾಜಕೂಡ
ಮನುಷ್ಯರದಲ್ಲ
ಅದ್ಯಾರದ್ದೋ, ನನಗೆ ಗೊತ್ತಿಲ್ಲ

ಭಾಶೇ

Women, not human
Cursed with a vagina
Life is prison
Abuse, our song
Crushed everyday to death
Women are not humans

Respect of the family, caste,
At times, village, taluk, districts too
Is hidden in our vaginas
We walk with fear
Women are not humans

Women are not animals either
Before you butcher a chicken or goat
Gender is not looked at
No iron rod is inserted into the vagina
Neither are they raped everyday
Forget about cows
Death is imminent if you kill one
At times even if you don’t
Cows are protected, women are not
Women are not humans

Women are not plants and trees either
Permits and jail, process involved
No gender to look at
Global warming
Inevitable truth
Women are not humans
Not animals, not plants or trees

Terrified of a man’s penis
Terrified of having a vagina
Hiding her existence
From birth to death
Loses “respect” easily
Loses life easily
Women are not humans

Is she an object? A weapon? Or “nothing”?

The society and everyone else who
Have brought women to this level
Are also not humans
I don’t know what they are!

BhaShe

No comments: