ಸ್ತನದಲ್ಲಿ ಸಣ್ಣವೆರಡು ಗೆಡ್ಡೆ
ಓಡಲು ಅಮ್ಮ ಬದುಕಿಲ್ಲ
ನಿಧಾನಕ್ಕೆ ಸಾಯುತ್ತಿದೆ ನಿದ್ದೆ
ಅಮ್ಮ ಇದ್ದಿದ್ದರೆ ಬಿಟ್ಟಾಳೇ
ಡಾಕ್ಟರ ಬಳಿ ಹೋಗಾಗಿರುತ್ತಿತ್ತು
ಒಂದು ನಿಮಿಷ ಕಾಯದೇ
ಔಷದಿ, ಚಿಕಿತ್ಸೆ ಮಾಡಾಗಿರುತ್ತಿತ್ತು
ಒಳಗೇ ಉಳಿಸಲು ಭಯ
ಸ್ನೇಹಿತೆಗೆ ಬಾತ್ ರೂಮಿನ ಗುಟ್ಟು
ಸಾವೇ ಕಂಡಂತೆ ಗಾಬರಿ
ನೋವೀಗ ಅವಳ ಸ್ವತ್ತು
ಕತ್ತರಿಸಿ ತೆಗೆದು, ಮುಗಿದು
ನಿರಾತಂಕ, ನಿರಾಳ
ಭರವಸೆ, ಮತ್ತೆ ಬರದು
ಕಾಲ ಹಾಕುವ ಗಾಳ.
ಭಾಶೇ
No comments:
Post a Comment