ಸಂಜೆಗತ್ತಲಲ್ಲಿ ಗಂಟೆ ಎಂಟಾದ ಮೇಲೆ
ಕೆಲ ಜನನಿಬಿಡ ಕೆಲ ನಿರ್ಜನ ಪ್ರದೇಶದಲ್ಲಿ
ಕಾಣಿಸುತ್ತಾಳೆ ಇವಳು, ತುಂಬಿದೆದೆಗಳ ರಾಕ್ಷಸಿ
ತಿರಸ್ಕಾರ ಭರಿತ ನೋಟ, ಕುಹಕ, ಛೀಕಾರ
ಬದುಕಲು ಇದೇ ದಾರಿಯಾಗಬೇಕ? ಮೂದಲಿಕೆ
ಕೆಲವರಿಗೆ ಕುತೂಹಲದ ವಸ್ತು, ಆಕರ್ಷಣೆ
ಬಣ್ಣದ ಚಿಟ್ಟೆಯಂತೆ ಸಿಂಗರಿಸಿಕೊಂಡು
ಎದೆ ಭಾರವ, ಸ್ತ್ರೀ ನಾಚಿಕೆಯ ಪ್ರದರ್ಶಿಸಿ
ಕಾಯುತ್ತ ನಿಂತಿರುತ್ತಾರೆ, ಲಜ್ಜೆಗೆಟ್ಟು? ಮಾನಗೆಟ್ಟು?
ಯಾರದೋ ಮೊದಲ ಸಲದ ಆಸೆಯ ತೀರಿಸಿ
ಇನ್ಯಾರದೋ ಅತಿ ಕಾಮುಕತೆಯ ನೀಗಿಸಿ
ಬೆಳಗಾಗುವುದರೊಳಗೆ ಮಾಯವಾಗುವ ಮಾಯಿನಿಯರು
ತುಂಬಿದೆದೆಗಳ ಹಿಂದೆ ಅವಿತಿರುವ ಭಾವಗಳೆಷ್ಟು?
ಬಣ್ಣ ಕಳೆದ ಮೇಲೆ ಹರಿವ ಕಣ್ಣೀರ ಕಥೆಯೇನು?
ಯಾವ ತಾಯಿ ಹೆತ್ತ ಮಗಳೋ ಹೀಗೆ ಬಾಳಲು?!
ಅರಿವಿರದ ನಿರ್ಲಜ್ಜೆಯಿಂದ ಮೂದಲಿಸುತ್ತೇವೆ ನಾವು
ಅವರ ಬಾಳಿನ ಪಥವ ನಡೆದವರಷ್ಟೇ ಬಲ್ಲರು
ನಿರ್ಭಾವುಕರೇ ಇವರು? ತುಂಬಿದೆದೆಗಳ ಮಾನಿನಿಯರು?
ಭಾಶೇ
ಕೆಲ ಜನನಿಬಿಡ ಕೆಲ ನಿರ್ಜನ ಪ್ರದೇಶದಲ್ಲಿ
ಕಾಣಿಸುತ್ತಾಳೆ ಇವಳು, ತುಂಬಿದೆದೆಗಳ ರಾಕ್ಷಸಿ
ತಿರಸ್ಕಾರ ಭರಿತ ನೋಟ, ಕುಹಕ, ಛೀಕಾರ
ಬದುಕಲು ಇದೇ ದಾರಿಯಾಗಬೇಕ? ಮೂದಲಿಕೆ
ಕೆಲವರಿಗೆ ಕುತೂಹಲದ ವಸ್ತು, ಆಕರ್ಷಣೆ
ಬಣ್ಣದ ಚಿಟ್ಟೆಯಂತೆ ಸಿಂಗರಿಸಿಕೊಂಡು
ಎದೆ ಭಾರವ, ಸ್ತ್ರೀ ನಾಚಿಕೆಯ ಪ್ರದರ್ಶಿಸಿ
ಕಾಯುತ್ತ ನಿಂತಿರುತ್ತಾರೆ, ಲಜ್ಜೆಗೆಟ್ಟು? ಮಾನಗೆಟ್ಟು?
ಯಾರದೋ ಮೊದಲ ಸಲದ ಆಸೆಯ ತೀರಿಸಿ
ಇನ್ಯಾರದೋ ಅತಿ ಕಾಮುಕತೆಯ ನೀಗಿಸಿ
ಬೆಳಗಾಗುವುದರೊಳಗೆ ಮಾಯವಾಗುವ ಮಾಯಿನಿಯರು
ತುಂಬಿದೆದೆಗಳ ಹಿಂದೆ ಅವಿತಿರುವ ಭಾವಗಳೆಷ್ಟು?
ಬಣ್ಣ ಕಳೆದ ಮೇಲೆ ಹರಿವ ಕಣ್ಣೀರ ಕಥೆಯೇನು?
ಯಾವ ತಾಯಿ ಹೆತ್ತ ಮಗಳೋ ಹೀಗೆ ಬಾಳಲು?!
ಅರಿವಿರದ ನಿರ್ಲಜ್ಜೆಯಿಂದ ಮೂದಲಿಸುತ್ತೇವೆ ನಾವು
ಅವರ ಬಾಳಿನ ಪಥವ ನಡೆದವರಷ್ಟೇ ಬಲ್ಲರು
ನಿರ್ಭಾವುಕರೇ ಇವರು? ತುಂಬಿದೆದೆಗಳ ಮಾನಿನಿಯರು?
ಭಾಶೇ
3 comments:
ಯಾರ್ಯಾರ ಒಡಲ ನೋವು ಏನೇನಿದೆಯೋ ಯಾರು ಬಲ್ಲರು..? ಎಲುಬಿಲ್ಲದ ನಾಲಿಗೆ ಹೊರಳಿಬಿಡುತ್ತದೆ ಅರಿಯದೆ ಅವರೊಡಲ ತುಚ್ಚವಾಗಿ ....
ಚಂದದ ಕವನ...
ಯಾರ ಮಗಳೋ ಇವಳು ಹೀಗೆ ಬಾಳು ಸವಿಸಲು ...ವಿಷಾದವನ್ನುಂಟು ಮಾಡುವ ಸಾಲುಗಳು.
ಕವಿತೆ ಪರಿಣಾಮಕಾರಿಯಾಗಿದೆ
ಯಾರದೋ ಕುಡಿ ಇನ್ಯಾರದೋ ಮುಡಿಗೇರಿ, ಬಾಳಬೇಕಾದವಳು ಕಾಲ ಕಸವಾಗಿ ಉಂಡೆದ್ದವರ ನಡುವೆ ಬದುಕ ಸಾಗಿಸ ಹೊರಟ ನತದೃಷ್ಟೆಯ ಚಿತ್ರಣವ ಬಿಡಿಸಿಟ್ಟು; ನಾವೇ ನೋಡಿ ನಗುವಷ್ಟು ನಾಗರೀಕರು.
Post a Comment