Saturday, January 17, 2015

ಕಳೆದುಹೋಗಿದೆಯೊಂದು ಖಜಾನೆ

ಹೊಸರುಚಿ ಮಾಡುವ ಕಾತರ
ಹಲವು ಹಳೇ ರುಚಿಗಳ ಆಗರ
ಯಾವ ಖಾಯಿಲೆಗೂ ಇದೆ ಮದ್ದು
ಹಂಚೀಕಡ್ಡಿಯ ದೃಷ್ಟಿ, ಕೆನ್ನೆ ಮೇಲೆ ಮುತ್ತು

ಮಕ್ಕಳೆಂದರೆ ಅಪರಿಮಿತ ಪ್ರೀತಿ
"ಬಾರೋ ಬಂಗಾರ" ಅವರು ಕರೆವ ರೀತಿ
ಜೀವನದಿ ಎಂದೂ ಮುಗಿಯದ ಆಸಕ್ತಿ
ಹಲವೊಮ್ಮೆ ತಂದಿಟ್ಟಿದೆ ಫಜೀತಿ

ಕ್ರೋಶಾದಲ್ಲಿ ಸ್ವೆಟರ್ ನ ಕೌಶಲ್ಯ
ಅವರ ಮಾತು, ಅನುಭವ ಅಮೂಲ್ಯ
ಬರೆಯಲಾಗದ್ದು ಅವರ ಭಾಂದವ್ಯ
ಅವರಿದ್ದಿದ್ದಷ್ಟೇ ನಮ್ಮ ಸೌಭಾಗ್ಯ

ಕಿತ್ತಳೆ, ಸೀಬೆ, ಬೀನ್ಸ್, ಸೌತೆಕಾಯಿ,
ಸಪೋಟ, ತೆಂಗು, ಮಾವು, ಪಪ್ಪಾಯ
ಹಣ್ಣು, ತರಕಾರಿ, ತೋಟ ಅವರ ಆಶಯ
ಅಜ್ಜಿಯ ಶಕ್ತಿ, ಯುಕ್ತಿಯ ವಿಜಯ

ಮಲೆನಾಡಿಗೆ ಬಂದು ಮನೆ ದೀಪವಾದರು
ಅಜ್ಜನ ಮನೆಯ ಶಕ್ತಿ, ದೀಪ್ತಿಯಾದರು
ಬಂಧು ಬಳಗಕ್ಕೆಲ್ಲಾ ಪ್ರೀತಿ ಹಂಚಿದರು
ಸಾವನ್ನು ಬೇಡಿ ಪಡೆದು ಮರೆಯಾದರು

ನಮ್ಮ ಹೃದಯದಲ್ಲಿ ಹಾಡಾಗಿರುವ ಪದ್ಮಮ್ಮ
ಕತೆ, ಎಣ್ಣೆ ನೀರು, ಕೆಲಸದ ಕೈ ಅಜ್ಜಮ್ಮ
ನಮ್ಮ ಕಣ್ಣಿಂದ ನೀವು ಹೀಗೆ ಮರೆಯಾದರೂ
ನಿಮ್ಮನ್ನು ಯಾರೂ ಮರೆಯಲಾರರು

ನಿಮ್ಮ ಬೆಳಕು

ಭಾಶೆ

1 comment:

Badarinath Palavalli said...

ನಮಗಾಗಿ ಕನ್ನಡ ಕವಿತೆ ಬರೆದುಕೊಟ್ಟ ತಮಗೆ ಶರಣು. ಬರಿಯುತ್ತಲೇ ಇರಿ, ನಾವು ಓದುತ್ತೇವೆ.

ಪದ್ಮಮ್ಮನವರ ಚಿತ್ರಣ ತುಂಬ ಮನೋಙ್ಞವಾಗಿ ಕಟ್ಟಿಕೊಟ್ಟಿದ್ದೀರ. ಅವರ ಜೀವನ್ಮುಖಿ ಪ್ರೀತಿ ನಮಗೆಲ್ಲ ಮಾದರಿಯಾಗುವಂತಿದೆ, ಸದಾ ಕಾಲ...