ಒಂದೊಂದು ಸಲಾ ಹಾಗೇ!
ಬದುಕಿರೋದು ಮರೆತೆ ಹೋಗುತ್ತೆ, ನಾವೂ, ಅವರೂ,
ಎಲ್ಲೋ ಥಟ್ಟನೆ ತಲೆಗೆ ಹೊಡೆದಂತೆ ನೆನಪಾಗುತ್ತೆ ಕೆಲವೊಮ್ಮೆ
ಅವರು ಬದುಕಿದ್ದಾರಲ್ವ?
ನಾವು ಮರೆತೇ ಬಿಟ್ಟಿದ್ದೆವಲ್ವ?
ಬದುಕು ಹಾಗೇ ಓಡ್ತಾನೆ ಇರುತ್ತೆ
ಹುಚ್ಚು ನಾಯಿ ಬೆನ್ನತ್ತಿದವರ ಹಾಗೆ,ದಾರಿಗಳು ಗೊತ್ತೇ ಆಗಲ್ಲ
ಕೆಲವೊಮ್ಮೆ ಬಿದ್ದು ಏಳೋಷ್ಟರಲ್ಲಿ ಕಾಲಗಲೇ ಕಳೆದು ಹೋಗಿರುತ್ತೆ
ಇರುವುದೊಂದೇ ಭೂಮಿ, ನಾಲ್ಕೇ ದಿಕ್ಕು
ಇಷ್ಟರಲ್ಲೇ ಅದೆಷ್ಟು ಕಳೆದು ಹೋಗಿರ್ತಿವಿ ನಾವು
ಮತ್ತೆ ಮತ್ತೆ ಸಂಧಿಸೋ ಮುಖಗಳು, ಕಾಡೋ ಪ್ರಶ್ನೆಗಳು
ನಾವು ನಡೆಯುತ್ತಿದ್ದೇವ, ಕಲ್ಲಾಗಿದ್ದೇವ?
ಎಲ್ಲ ಕಡೆ ಗಿರಕಿ ಹೊಡೆದು ಅಲ್ಲೇ ಬಂದು ಬೀಳತ್ತೆ ಮತ್ತೆ
ನೆನ್ನೆ, ನಾಳೆ, ಇಂದು, ಎಲ್ಲಾ ಒಂದೇ ಆಗುತ್ತೆ
ಆದರೂ ನಾವೇನೋ ದಿಗ್ವಿಜಯದ ಕುದುರೆ ಏರಿದವರಂತೆ
ಮತ್ತೊಮ್ಮೆ ಹೀಗೇ ಕಳೆದು ಹೋಗಿರುವೆ
ಮತ್ತೊಮ್ಮೆ ಹೀಗೇ ಜಾಗೃತಳಾಗಿರುವೆ
ಬದುಕು ಯಾವ ವ್ಯತ್ಯಾಸವನ್ನು ತೋರುವುದಿಲ್ಲ
Translation
Awaken
At time its like this
we forget being alive, we, as well others
suddenly it flashes in mind
oh! they are alive,
alas! We had forgotten
life keeps running
as if a mad dog is back of it, loosing roads,
by the time we get up after a fall, ages pass
its a single earth, only four directions,
but we keep getting lost
we keep seeing the same faces, same questions throw up,
are we moving or standing still like a rock?
Everything roams around and comes back to it
yesterday, today, tomorrow, is all one
still we pose as if we have conquered
am lost again,
am awaken again,
life shows no difference
Dear Readers,
Please tell me if the translation conveys the same meaning of the original.
BhaShe
1 comment:
ಶರಧಿಯ ಬ್ಲಾಗಿನ ಕಿ೦ಡಿಯಿ೦ದ ನಿಮ್ಮ ಬ್ಲಾಗ್ ಮನೆಗೆ ಬ೦ದೆ, ಕನ್ನಡ-ಆ೦ಗ್ಲ ಕವನ ಓದಿದೆ, ಚೆನ್ನಾಗಿವೆ, ಖುಷಿ ಯಾಯಿತು. ಜೊತೆಗೆ ನೀವು ಗೋಣಿಬೀಡಿನವರೆ೦ದು ತಿಳಿದು ಮತ್ತಷ್ಟು ಖುಷಿಯಾಯಿತು. ನನಗೆ ಆ ಪರಿಸರದಲ್ಲಿ ತು೦ಬಾ ಜನ ಪರಿಚಿತರು ಇದ್ದಾರೆ. ನನ್ನ ಬ್ಲಾಗಿಗೂ ಬರುತ್ತಿರಿ.
Post a Comment