Saturday, March 6, 2010

ಮೂರು ದಿನ

ತಿಂಗಳಿಗೆ ಒಮ್ಮೆಯೇ ನಾನು ಹೆಣ್ಣು ಎಂದು ನೆನಪಾಗುವುದು

ಆ ಫೂಟ್ ಬೋರ್ಡ್ ಪ್ರಯಾಣಗಳು
ಸಂಜೆ ಏಳರ ಮೇಲೆ ಕೆಲಸ ಓಡಾಟ
ಜೀನ್ಸು, ಟೀ-ಶರ್ಟು, ಜುಟ್ಟಿಲ್ಲದ ತಲೆ
ಸೆಡವು ಧೈರ್ಯ ದರ್ಪ
ಇದೆಲ್ಲದನು ಮೀರಿದ ಆ ಮೂರು ದಿನಗಳು
ನಾನು ಹೆಣ್ಣು ಎಂಬುದ ನೆನಪಿಸುತ್ತವೆ

ಒಂದಷ್ಟು ಕೋಪ ಮತ್ತೊಂದಷ್ಟು ಸಮಾಧಾನ
ಕಾಡುವ ಹೊಟ್ಟೆ ನೋವು ಸೊಂಟ ಬೇನೆ ಸುಸ್ತು
ಮುಳುಗೆದ್ದಾಗ ಮೈಗಂಟಿದ ನೀರ ಹನಿಗಳಂತೆ
ಜಾರಿದರು ಒಣಗಿದರು ಅನುಭವ ಹಸಿ ಹಸಿ ಖುಷಿ
ಆ ಮೂರು ದಿನಗಳು ಎಲ್ಲ ಮರೆತು ಬರೀ ಹೆಣ್ಣಾಗುವ ದಿನಗಳು

ನಿಂತ ಒಡನೆಯೇ ಶುರು ಹಿಂದೆ ನಿಲ್ಲಿಸಿದ ಓಟ
ಮರೆತು ಎಲ್ಲವುದನ, ಹೆಣ್ಣೆoಬುದನ ಕೂಡ
ಒಂದು ತಿಂಗಳು ಕಾಯಬೇಕು ಮತ್ತದು ನೆನಪಾಗಲು.

ಭಾಶೇ

6 comments:

ಸುಧೇಶ್ ಶೆಟ್ಟಿ said...

ವಾವ್ ಅನ್ನಿಸುವ೦ತಹ ಕವನ... ತು೦ಬಾ ಚೆನ್ನಾಗಿದೆ....

kanasu said...

hahaha its nice! :) havnt read this befor!

PARAANJAPE K.N. said...

chennaagide

shivu.k said...

ಈ ವಿಚಾರವನ್ನು ಇಷ್ಟು ನೇರವಾಗಿ ಬರೆದಿದ್ದು ನೀವೇ ಇರಬೇಕು. ಚೆನ್ನಾಗಿದೆ.

Raghu said...

ಸುಂದರ ಕವನ.. ಹೀಗೆ ಬರೆಯುತ್ತ ಇರಿ...
ನಿಮ್ಮವ,
ರಾಘು.

ದಿನಕರ ಮೊಗೇರ said...

soopar...... ee vishavannu ishtu saralavaagi bareyabahudu endu heLiddeeri........