Wednesday, April 28, 2010

ನೆನ್ನೆ ಸಂಜೆ - कल शाम

ಮಬ್ಬುಗತ್ತಲು
ಬಸ್ ಸ್ಟಾಪಿನಲ್ಲಿ ಒಬ್ಬಳೇ ನಿಂತಿದ್ದೆ
ಸುರಿದ ಮಳೆಗೆ ರಸ್ತೆಯೆಲ್ಲ ಒದ್ದೆಯಾಗಿತ್ತು
ಮರದ ಎಲೆಗಳಿಂದ ಹನಿಗಳಿನ್ನೂ ಬೀಳುತ್ತಿದ್ದವು
ಕೊಚ್ಚೆ ನೀರಿಗೆ ಸಿಗದಂತೆ ನಿಂತಿದ್ದೆ ಕಾಯುತ್ತಾ ಬಸ್ಸಿಗೆ

ಲೈಟ್ ಹಾಕಿ ಕೆಲವು, ಹಾಕದೆ ಕೆಲವು ಬಸ್ಸು ಬಂದವು, ಹೋದವು
ಬೀದಿ ದೀಪದ ಬೆಳಕಿರಲಿಲ್ಲ
ಕಣ್ಣು ಕಿರಿದಾಗಿಸಿ ಬೋರ್ಡು ಓದಿ ಕೈ ಅಡ್ಡ ಹಿಡಿದಿದ್ದೆ ಎಲ್ಲವಕು
ಯಾವೂ ನಿಲ್ಲಿಸಲಿಲ್ಲ! ಎಲ್ಲವೂ ನನ್ನ ಗಮ್ಯವ ದಾಟುವವೇ
ಇದೇನಿದು ವಿಚಿತ್ರ ಇಂದು? ಯೋಚನೆಗೀಡಾಗಿದ್ದೆ

ಛತ್ರಿಯಿಲ್ಲದೆ ಮಳೆಗೆ ಸಿಗುವ ಗಾಬರಿ ಬೇರೆ ಮನದಲ್ಲಿ
ಬಸ್ಸು ಬಿಟ್ಟು ಬೇರಾವುದೇ ವಾಹನಗಳ ಸುಳಿವಿರಲಿಲ್ಲ ರಸ್ತೆಯಲಿ
ಜೋರು ಮಳೆಯ ಶನಿವಾರದ ಸಂಜೆ, ಯಾರಾದರು ರಸ್ತೆಗ್ಯಾಕೆ ಇಳಿದಾರು?
ಮತ್ತೆ ನಾಲ್ಕು ಬಸ್ಸುಗಳು ನನ್ನ ಇರುವ ಗಮನಿಸದೆ ಸಾಗಿದವು
ನಿಲ್ದಾಣದಲ್ಲಿ ಸಹಪ್ರಯಾಣಿಕರಾದರು ಬರಲಿ, ಮನದ ಬಯಕೆ

ನೆನ್ನೆವರೆಗೂ ಕಂಡಾಗೆಲ್ಲ ಕಾಡಿಸುತ್ತಿದ್ದ ಕಾಮಣ್ಣ ಹಾಜರಾಗಬೇಕೆ?
ಸಂಜೆ, ಒಂಟಿ ನಾನು, ಮಳೆ ಬಂದ ಭೂಮಿ, ಮನ ನಡುಗಿತ್ತು
ಅವನ ಸಿಳ್ಳು, ಮಾತುಗಳ ಮಳೆ ಸುರಿಯಲಿಲ್ಲ ಎಂದಿನಂತೆ, ನಾನು ದಂಗಾದೆ
ಅವನ ಕಡೆಗೆ ನಾಲ್ಕು ಬಾರಿ ನೋಡಿ ಸುಮ್ಮನಾದೆ
ಮರೆತೇ ಹೋಗಿತ್ತು, ನೆನ್ನೆ ನಾನು ಕರೆಂಟು ತಗುಲಿ ಸತ್ತುಹೋಗಿದ್ದು
ಮತ್ತೆ ಬಸ್ಸಿಗೆ ಕಾಯುವ ಹಂಗ್ಯಾಕೆಂದು ಗಾಳಿಯಲಿ ತೇಲುತ್ತಾ ಸಾಗಿದೆ.

ಭಾಶೇ


कल शाम

साँझ था,
बस स्टॉप पर अकेली खड़ी थी.
बारिश से रास्ता गीला था
पेड़ों के पत्तों से पानी की बूंदें टपक रही थी
कीचड़ से बचते में बस के इंतजार में खड़ी थी.

कुछ बसें लाइट जलाये कुछ बिन जलाये आई और चली गयी
बिजली के खम्बों पर भी लाइट नहीं थी,
धुंधले से प्रकाश में बोर्ड पढ़ हर बस को रोका था मैंने
किसी ने भी नहीं रोका, सब मेरे गम्य की तरफ ही जा रहे थे
ये क्या अजीब है आज! सोच में पड़ गई.

बिना छाता के बारिश में फंसने का डर था मन में
बस के सिवा कोई ओर वाहन नहीं था रस्ते में
जोर बारिश की शनिवार की शाम थी रस्ते में क्यों कोई आता
फिर से चार बस मुझे बिन देखे चले गई
स्टॉप पर कोई सह यात्री तो आ जाये... मन की आशा

हमेशा छेड़ने वाले सड़क छाप हाजिर हो गया
शाम, अकेली मैं, भीगा हुई रस्ता, मन डर गया
उसकी सीटी, बातों की बारिश शुरू नहीं हुई मैं चौंक गयी!
चार बार उसकी तरफ देख कर चुप हो गयी
भूल ही गयी थी, कल मैं बिजली छू के मर गयी थी

भाशे

5 comments:

Aditi said...

Hey,
I read the hindi version..
The poem's really good. But, I got scared after reading the last line, wasn't expecting such an end.
You have very nicely maintained the suspense till the end... :)

Kirti Singh Dangwal said...

For me this was more like a story than a poem...Actually I couldn't make out the difference (whether to consider it a poem or a story written in a poetic fashion)... But nice imagination once again... Cheers!!

ಭಾಶೇ said...

Kirti,

I understand.

I think its due to the translations. In the original version (Kannada) it is poetic.

Will try for better portray of feelings in Hindi next time.

Thanks

ಸೀತಾರಾಮ. ಕೆ. / SITARAM.K said...

ನವ್ಯಶೈಲಿಯಲ್ಲಿನ ತಮ್ಮ ಕಾವ್ಯ ಅದ್ಭುತ! ಕೊನೆಗೆ ಅ೦ತ್ಯ ರೋಚಕವಾಗಿತ್ತು. ಏನೇನೋ ಯೋಚಿಸಿ, ಉಪಮೆ ಸ೦ಕೇತ ಅ೦ತಾ ತಲೆ ಕೆಡಿಸಿಕೊಳ್ಳುತ್ತಾ ಓದಿದವರಿಗೆ ಧುತ್ತೆ೦ದು ಎತ್ತಿ ನೆಲಕ್ಕೆ ಒಗೆವ ಅ೦ತ್ಯ ಚೆನ್ನಾಗಿದೆ.

ಮನಸು said...

wow!!

enta kone saalu nija ommele shock aytu ....... very nice really i like this kavana