ಇದೇ ಅಲ್ಲವೇ ನಿನಗೆ ಬೇಕಾಗಿದ್ದು?
ನನ್ನ ರಕ್ತ ಕಣ್ಣೀರು
ತಣ್ಣಗೆ ನದಿಯಂತೆ ಸಾಗುತ್ತಿದ್ದ ನನ್ನ ಬಾಳಿಗೆ
ಕಲ್ಲೆಸೆದವನು ನೀನೇ
ನನ್ನ ಪಾಡಿಗೆ ನಾನಿದ್ದವಳಿಗೆ
ಇಲ್ಲದ ಆಸೆ ತೋರಿಸಿದವ ನೀನೇ
ನನ್ನದು ಅಂತ ಒಂದು ಗೂಡಿತ್ತು, ಗುರಿಯಿತ್ತು
ತನ್ನದೇ ರೀತಿಯಲಿ ನನ್ನ ಬಾಳು ಚೆಂದಿತ್ತು
ಅಳುವೋ, ನಗುವೋ, ಬಾಳಲು ಛಲವಿತ್ತು
ಹೆಜ್ಜೆಗಳ ನಾನು ನಿಧಾನವಾಗಿ ಕೀಳುತ್ತಿದ್ದರೂ
ಇಡಲು ಕಾಲಡಿ ನೆಲವಿತ್ತು
ನೀನಿತ್ತ ಕನಸುಗಳಲಿ ಬರೀ ರೆಕ್ಕೆಗಳು
ಭೂಮಿಯಿಂದೆತ್ತರದಿ ಹಾರಾಟ, ಮರಗಳ ತುದಿ ಒಡನಾಟ
ನದಿಯ ಜಲಪಾತವಾಗಿಸಿದವನೇ
ಹುಚ್ಚು ಹೆಬ್ಬಂಡೆಗಳ ತಂದುರುಳಿಸಿ ಗಲಗುಟ್ಟಿಸಿದವನೇ
ನಾನೇನು ಮಾಡಿದ್ದೆ ಹೇಳು ಇದ ಅನುಭವಿಸಲು?
ಒಮ್ಮಿಂದೊಮ್ಮೆ ಮರೆಯಾಗಲಿಲ್ಲ ನೀನು
ದಿನಾ ಕರಗುವ ಚಂದ್ರಮನಂತೆ
ಆಗೊಮ್ಮೆ ಈಗೊಮ್ಮೆ ನೆನಪಾದರೆ ಸುರಿವ ಅಡ್ಡ ಮಳೆಯಂತೆ
ಆಲಿಕಲ್ಲುಗಳ ಏಟುಗಳ ಕಲೆ, ಮೈಯೆಲ್ಲಾ ತುಂಬಿದೆ
ನದಿಯ ನೀರೊಣಗಿ, ಕನಸುಗಳ ರೆಕ್ಕೆ ಮುರಿದು
ಎಲ್ಲಾ ಮತ್ತೆ ಮಣ್ಣಿಗೆ, ಶರಣಾಗಿರುವೆ
ಎತ್ತರದಿಂದ ಬಂದು ಬಂಡೆಗಪ್ಪಳಿಸಿದ ರಭಸಕ್ಕೆ
ಬಂಡೆಗೇ ನೋವಾಗಿದೆ, ನಾನುಳಿದಿರುವೆನೆ?
ಮೋಸದ ಮುಗ್ಧ ಮುಖ ನಿನ್ನದು
ಕೃಷ್ಣನಂತದೆ ಒಂದು ಹೆಸರು, ಹಾಳಾಯ್ತು ಇಂದು
ಕಲೆಗಳು ಮಾಸಲು, ಕೊಳೆ ತೊಳೆಯಲು ಕಾಯುವೆ ಮಳೆಗೆ
ಕಣ್ಣಿಂದ ಹರಿದ ರಕ್ತ ಕಿವಿ, ಮೂಗು, ಬಾಯ ಸಂದಿಗಳಲಿ ಹೆಪ್ಪುಗಟ್ಟಿದೆ
ಮುತ್ತುವ ನೊಣಗಳ ಹಾರಿಸುವ ವ್ಯರ್ಥ ಪ್ರಯತ್ನ ಜಾರಿಯಿದೆ
ಭಾಶೆ
5 comments:
ವಾವ್... ಕನ್ನಡ ಕವನ ಬರೆದಿದ್ದೀರಾ ಅಪರೂಪಕ್ಕೆ :) ತು೦ಬಾ ಚೆನ್ನಾಗಿದೆ ಕೂಡ :)
Nimma blognalli Aparoopakke kannada salu nodi khushiyayitu..
Chennagide kavana..
ವಾವ್! ಕವಿತೆಯು ನೀಡುವ ಚಿತ್ರಣ ಅದ್ಭುತವಾಗಿದೆ! ತುಂಬಾ ಅರ್ಥಪೂರ್ಣವಾದ ಮನ ಚುಚ್ಚುವ ಸಾಲುಗಳಿವೆ. ನದಿ, ಜಲಪಾತ, ಬಂಡೆಗಳು, ಮಳೆ, ಆಲಿಕಲ್ಲು, ಇವೆಲ್ಲವು ಸುಂದರ ಹೋಲಿಕೆಗಳು
vaaw.... vaaw.. vaaw.....
tumbaa chennaagide...
khushiyaayitu.... kannaDa ishTu chennaagi barItaa ideeraa....
ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......
Very nice poem
Post a Comment