ಅಮ್ಮನ ಬೆಚ್ಚನೆ ರೆಕ್ಕೆಗೂಡಿಂದ ದೂಡು ಎಂದು
ದೂಡಿಸಿಕೊಂಡು ಹೊರಬಂದ ಹಕ್ಕಿ ನಾನು
ಹಾರಿ, ಹಾಡಿ, ದಣಿದು ಇಂಧನ ತೀರಿದೆ ಇಂದು
ಹೋಗಲಾರೆನು ಮರಳಿ ಗೂಡಿಗೆ, ಅಮ್ಮನ ಮಡಿಲಿಗೆ
ಅವಳ ಕಣ್ಣೆದುರಿಗೇ ಅವಳೇರದೆತ್ತರಕೆ ಹಾರಿದ್ದೆ
ಅವಳ ಕಣ್ಣಿಗೀಗ ನಾನು ದೊಡ್ಡವಳು, ಬೆಳೆದು ನಿಂತವಳು
ಮತ್ತೆ ಮಡಿಲಿಗೆ ಬರಲಾರಳೇನೋ ಎಂದು ಸಮಾಧಾನಿಸಿಕೊಂಡು
ನಾನೇರಿದ ಎತ್ತರವನ್ನ ಅಳೆದು ಖುಷಿಪಡುತ್ತಿದ್ದಾಳೆ
ನನಗೂ ಮತ್ತೆ ಮಡಿಲಿಗೆ ಹೋಗಿ ಬೀಳಲು ಹಿಂಜರಿಕೆ
ನಾನು ಕಷ್ಟ ಪಟ್ಟು ಕಟ್ಟಿದ್ದ "ಬೆಳೆದೆ"ನೆಂಬ ಭ್ರಮೆ ಮುರಿವುದೆಂದು
ಅದಕೇ ಅಮ್ಮನ ಕಣ್ಣಿಂದ ದೂರ ಹಾರಿ ಬಂದಿದ್ದೇನೆ
ನೆಲ ಸೇರಿದ್ದೇನೆ, ಕಣ್ಣೀರಾಗಿದ್ದೇನೆ, ಹಸಿದಿದ್ದೇನೆ
ನನಗೀಗ ಅಮ್ಮನ ನೆನಪಷ್ಟೇ, ಗೂಡು ಬಲು ದೂರ
ಅವಳ ಪ್ರೀತಿಯದೇ ನೆನಪು, ಅವಳ ಸೇರುವ ತವಕ
ಕಣ್ಮುಚ್ಚಿದರೆ ಅವಳ ಮುಖ, ಕಣ್ತೆರೆದರೆ ಕಣ್ಣೀರು
ಬಾಯ್ಬಿಟ್ಟರೆ ಮಾತಿಗಿಂತ ಬಿಕ್ಕಳಿಕೆಯೇ ಜಾಸ್ತಿ
ನನ್ನ ಕಣ್ಣೀರಿಗೆ, ಕರುಳ ಕರೆಗೆ ಅವಳೇ ಹುಡುಕಿ ಬಂದಳೇನೋ ... ಆಸೆ
ಅವಳಿಗೆ ನಾನು ಸೋತಿರುವುದು ಗೊತ್ತೇ ಆಗಿರಲಿಕ್ಕಿಲ್ಲ
ಮುರಿದ ರೆಕ್ಕೆಗಳಿಂದ ಕಣ್ಣೀರೋರೆಸಿ ಕುಂಟುತ್ತಾ ನಡೆಯುತ್ತೇನೆ
ಗೂಡಿನ ಆಸೆ ಮನದಲ್ಲಿ, ಅತಿಯಾದ ಸ್ವಾಭಿಮಾನ ತಲೆಯಲ್ಲಿ
ಭಾಶೆ
10 comments:
Hey!!!! Tumba chennagide!!!!
Hmmmm anubhava- bhavane eradu kudi bandied :)
Thank you Kanasu.
Bhashe,
Kavana hidisitu..! ammana nenapondistu manassige eshtu hita..!
Dhanyavaadagalu
-Prashanth
Thank you Prashanth.
Amma yavaglu haage taane...
Chennagide..
ಸುಂದರ ಕವಿತೆ...
ಭಾವಗಳು ಚೆನ್ನಾಗಿ ವ್ಯಕ್ತವಾಗಿದೆ...
ಅಭಿನಂದನೆಗಳು...
Nimma protsahakke hrutpoorvaka dhanyavadagalu.
BhaShe
ನಾವೆಲ್ಲಾ ಮೇಲೇರಿದ್ದೇವೆ ಎಂಬ ಭ್ರಮೆಯಲ್ಲಿರುತ್ತೇವೆ. ನಾವು ಜತೆಗೇ ಸೋಲುತ್ತಿದ್ದೇವೆ ಎಂಬ ವಾಸ್ತವ ಅರಿತರಷ್ಟೇ ಮುಂದಕ್ಕೆ ಕಾಲಿರಿಸಬಹುದೋ ಏನೋ...insightful, hearttouching poem..
ಹಾಯ್ ರಿ
ನಿಮ್ಮ ಕವಿತೆ ಓದಿದೆ ತುಂಭಾ
ಮುದ್ದಾಗಿದೆ ನಮ್ಮ ಮನೆಯ ಪಕ್ಕದ ಆ ಚೆಲುವೆಯ
ತರ ಮುದ್ದು ಮುದ್ದಾಗಿದೆ.
ಉಳಿದವುಗಳನ್ನು ಬಿಡುವಿದ್ದಾಗ ಓದುತ್ತೆನೆ
ಧನ್ಯವಾದಗಳೋಂದಿಗೆ
intricate thoughts into words in a very nice way. you are a talent!
Post a Comment