Tuesday, July 13, 2010

ಗರ್ಭಪಾತ

ಹೊಟ್ಟೆಯಲಿ ಹುಟ್ಟಿದ್ದ ಕನಸೊಂದು ಕಸವಾಗಿ ಕಮರಿಹೊಯ್ತು
ಅದಿತ್ತಿದ್ದ ನಿರೀಕ್ಷೆ, ಭರವಸೆಗಳೆಲ್ಲ ಬಸಿದುಹೋಯ್ತು

ಕೈಯಲ್ಲಿದ್ದ ಮದರಂಗಿಯ ಕೆಂಪು ಆರುವ ಮುನ್ನ
ಕಣ್ಣಲ್ಲಿ ಹೊಸತೊಂದು ಆಸೆ ಬೆಳೆದಿತ್ತು, ನಲಿದಿತ್ತು
ಮನದೊಡೆಯನ ಪ್ರೀತಿ ಸುರಿದಿತ್ತು ಮಳೆಯಾಗಿ
ಹರಿದಿತ್ತು ಹೊಳೆಯಾಗಿ, ತುಂಬಿಸಿ ನನ್ನೊಡಲ

ಒಂದೊಂದೇ ಆಸೆಗಳ ಎತ್ತಿಟ್ಟು ಕಾದಿದ್ದೆ
ಖುಷಿಯ ಹೊನಲು ಹರಿದಿತ್ತು ಗೀಟುಗಳೆರಡು ಮೂಡಿದಾಗ
ಸ್ವರ್ಗಕ್ಕೆ ಮೂರೇ ಗೇಣು ಇನಿಯನ ಕಿವಿಯಲಿದ ಒಸರುವಾಗ
ಸ್ವರ್ಗವೇ ಧರೆಗಿಳಿದಿತ್ತು ಅವನ ಕಣ್ಣಲಿ ಸಂತೋಷ ಉಕ್ಕಿ ಹರಿದಾಗ

ಒಂದಿಷ್ಟು ಇರಿಸು ಮುರಿಸು, ಹಿಂಜರಿಕೆ, ಗೊಂದಲ
ನಾಳೆಗಳ ಕನಸುಗಳು ಹೊಳೆಯಾಗಿ ಹರಿದಿದ್ದವು
ಮೈದುಂಬಿ, ಮನದುಂಬಿ, ಕಣ್ದುಂಬಿ ನಲಿದಿದ್ದೆ
ಸಂತೋಷವೆಂಬ ಪದಕ್ಕೂ ಅಸೂಯೆ ಬರುವಂತೆ

ವಿದಿರಚಿಸಿತ್ತು ಈ ಸಂತೋಷವ ಕೀಳುವ ಹೂಟ
ಅವಘಡಕ್ಕೆ ಸಿಕ್ಕಿ ಬಲಿಯಾಗಿತ್ತು ಕನಸುಗಳ ಮಹಲು
ಸೂತಕದ ಛಾಯೆ ಇನ್ನೂ ಇಳಿದಿಲ್ಲ ಮುಖದಿಂದ
ಭರವಸೆಗಳೇ ಬಂದೆನ್ನ ಖಾಲಿಯೆದೆಯ ತುಂಬಿ

ಭಾಶೇ

9 comments:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿ ಮಗುವಿನ ಹತ್ಯೆಯನ್ನ ಬಣ್ಣಿ ಸಿದ್ದಿರಿ

ನಿಜಕ್ಕೂ ಗರ್ಭಪಾತ ನೀಡುವ ನೋವು ಕಲ್ಪಿಸಲು ಅಸಾದ್ಯ

Dr.D.T.Krishna Murthy. said...

I understand the pain,agony and the suffering.ಮನಸ್ಸಿಗೆ ಬೇಸರವಾಗಿದೆ.ನಿಮಗೆ ಸಂತಸ ಸಿಗಲಿ,ನೆಮ್ಮದಿಯ ದಿನಗಳು ಬರಲಿ ಎಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.ನಮಸ್ಕಾರ.

kanasu said...

ಹೇಯ್ ತುಂಬಾ ಚೆನಾಗಿದೆ! :)

ಸೀತಾರಾಮ. ಕೆ. / SITARAM.K said...

ಸಂತಸದ ಸಂಬ್ರಮದಲ್ಲಿ ಸೂತಕದ ಛಾಯೆ!
ಗರ್ಭದರಿಸಿದ ದಿನದಿಂದ ಹೆರಿಗೆವರೆಗಿನ ಮನದ ದುಗುಡ !
ತುಗುಕತ್ತಿಯ ತಲೆಯ ಮೇಲಿನ ಹೊಯ್ದಾಟ!
ಅದು ಎರಗಿದಾಗ ಗರ್ಭಪಾತ!
ಮನಕಲಕುವಂತೆ ಗರ್ಭಪಾತದ ಕ್ಷಣದ ಮನದಾಳವನ್ನು ಹೇಳಿದ್ದು ಅನುಭವಿಸಿದಂತಿದೆ.
ಬರದಿರಲಿ ಯಾವ ಮಾತೆಯಾಗುವ ಕನಸಿನ ಕಣ್ಣುಗಳಿಗಿದು.

Raghu said...

nice one..
Raaghu

ಮನಸಿನಮನೆಯವನು said...

ಭಾಶೇ ,

ತುಂಬಾ ಭಾವುಕವಾಗಿದೆ..

ವಾಣಿಶ್ರೀ ಭಟ್ said...

tumba sundaravaagide

SATISH N GOWDA said...

ನಿಮ್ಮ ನಾಲ್ಕು ಸಾಲುಗಳ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ

ಸತೀಶ್ ನ ಗೌಡ

www.nannavalaloka.blogspot.com

Badarinath Palavalli said...

I am really sorry

ಓದಿ ಬೇಸರವಾಯಿತು. ತಾಯ್ತನದ ಕನಸ್ಸು ಹೀಗೆ ಚಿವುಟಿಹಾಕುವ ದೇವರೇ ನಿನಗೂ ಮನಸ್ಸಿದೆಯೇ?