Tuesday, May 24, 2011

ಗಂಡಸರೇ

ನಿಮ್ಮ ಕೀರ್ತಿಯ ಬಸಿರ ಹೊರಲು ನಾವೇ ಬೇಕು
ಇಲ್ಲದ ಸಂಭ್ರಮ ನಿಮ್ಮಲ್ಲಿ, ಬೀಗುವಿರಿ ದೊಡ್ಡದೇನೋ ಸಾಧಿಸಿದ ಖುಷಿಯಲ್ಲಿ
ಹೊಟ್ಟೆಯಲ್ಲಿರುವ ಚಿಗುರಿನ ಬೇರು
ಯಾವತ್ತೂ ನಮ್ಮ ಹೊಟ್ಟೆಯ ಗುಟ್ಟು, ನಿಮಗೇನು ಗೊತ್ತು?

ಬೊಗಸೆ ಪ್ರೀತಿಗಾಗಿ, ಗೆಳೆತನಕ್ಕಾಗಿ ಬೇಡುವ ನಾವು
ಅದಕ್ಕೇ ಹಿಗ್ಗಿ ಹೀರೆಕಾಯಿಯಾಗುವ ನೀವುಗಳು
ನಾವೇ ಬಿಟ್ಟು ಕೊಟ್ಟ ರಾಜ್ಯಕ್ಕೆ ಅಧಿಪತಿಯಾಗಿ
ನಮ್ಮ ಮೇಲೇ ದಬ್ಬಾಳಿಕೆ ಮಾಡುವ ಮೀಸೆ ಹೊತ್ತ ಜಿರಳೆಗಳು

ಎಂದಿಗೂ ತ್ಯಾಗ, ಬಲಿದಾನವೆಲ್ಲಾ ಹೆಣ್ಣಿನ ಜವಾಬ್ದಾರಿಯೇ
ಮೈ ಬೆಳೆದರೂ ಬುದ್ಧಿ ಬೆಳೆಯದ ಗಂಡುಕುಲಕ್ಕೆ
ಹೆಣ್ಣು ಜಾತಿಯ ಅರ್ಥವಾಗದ ತಳಮಳಗಳ ತಿಳಿಸಬೇಕು
ನಿಮ್ಮನ್ನು ಮನುಷ್ಯರಾಗಿಸುವಲ್ಲಿ, ನಮ್ಮ ಕೂದಲು ಹಣ್ಣು

ನಿಮ್ಮ ಹೆತ್ತಿದ್ದಕ್ಕಾಗಿ, ಪೊರೆದಿದ್ದಕ್ಕಾಗಿ, ಸಂತಾನ ಸುಖ ನೀಡಿದ್ದಕ್ಕಾಗಿ
ಪಿತೃಗಳೆಂದಿದ್ದಕ್ಕಾಗಿ, ನಿಮಗಾಗಿ ಅತ್ತಿದ್ದಕ್ಕಾಗಿ, ನಿಮ್ಮೊಡನೆ ನಕ್ಕಿದ್ದಕ್ಕಾಗಿ
ನಮ್ಮನ್ನೂ ಒಮ್ಮೊಮ್ಮೆ ಪರಿಗಣಿಸಿ, ನಿಮ್ಮ ಆದ್ಯತೆಗಳಲ್ಲಿ
ನಿಮಗೆ ನಾವಿತ್ತ ಸಂಭ್ರಮದಲ್ಲಿ, ನಮಗೂ ಒಂದು ಪಾಲಿರಲಿ.

ಭಾಶೆ

7 comments:

ದಿನಕರ ಮೊಗೇರ said...

hha hha... sakkaataagide...

oLLe pIkalaaTa idu...
chennaagide endare nIvu baredaddellaa oppikonDa haage...

nijavaagiyU oLLeya kavana....

sIdaa sIdaa mukhakke hoDeda haagide...

Sumanth Hegde said...

ಇದು..
ಅರ್ಧಸತ್ಯ - Half Truth

ಸುಧೇಶ್ ಶೆಟ್ಟಿ said...

kavanavEnO chennagi barediddeeri... aadare generalize maadi baredha haagillave!

ಭಾಶೇ said...

ದಿನಕರ್ ಸರ್,
ಕವನ ಮೆಚ್ಚಿದರೆ ಅದನ್ನು ಒಪ್ಪಿಕೊಂಡಂತೆ ಅಲ್ಲ. ಮೆಚ್ಚುಗೆಗೂ ಅನ್ವಯಿಸುವುದಕ್ಕೂ ವ್ಯತ್ಯಾಸ ತುಂಬಾ ಇದೆ.

ಸುಮಂತ್,
ನನ್ನ ಬಾಣ ನನಗೇ ತಿರುಗಿಸುತ್ತೀರಾ? ಹ್ಹ ಹ್ಹ ಹ್ಹಾ

ಸುಧೇಶ್,
ಕವನ ಓದಲು ಎಲ್ಲರಿಗು ಮುಕ್ತ. ಆದರೆ ಅಲ್ಲಿ ಬರೆದಂತೆ ಇರುವವರಿಗೆ ಮಾತ್ರ ಅನ್ವಯಿಸುತ್ತದೆ. ನನ್ನಪ್ಪ, ಚಿಕ್ಕಪ್ಪ, ತಾತ, ನಾ ನೋಡಿದ ಹಲವು ಗಂಡಸರು ಹೆಣ್ಣನ್ನು ಗೌರವದಿಂದ, ಧರ್ಮಪತ್ನಿಯಂತೆ ಕಾಣುತ್ತಾರೆ. ಹಾಗೆಯೇ ಹೆಣ್ಣನ್ನು ಚಪ್ಪಲಿ ಎನ್ನುವ ಗಂಡಸರೂ ಇದ್ದಾರೆ.
ಬರಹಗಳೆಲ್ಲ "ಅವರವರ ಭಾವಕ್ಕೆ, ಅವರವರ ಭಕುತಿಗೆ" ಅಲ್ಲವೇ?

ಎಲ್ಲರಿಗು ಧನ್ಯವಾದಗಳು.

samz said...

idu swalpa jasti aitu kane!! :D

ಸೀತಾರಾಮ. ಕೆ. / SITARAM.K said...

chennaagide aadare meese hotta gandasarige maatra sambodhisidantide (jeeralegale). meese tegedavarannu bittiddu yaakop sari annisalilla...

ಗಿರೀಶ್.ಎಸ್ said...

ಮೈ ಬೆಳೆದರೂ ಬುದ್ಧಿ ಬೆಳೆಯದ ಗಂಡುಕುಲಕ್ಕೆ....idu yaako ondu reeti vichitra annisitu...gandigu kuda hennina talamala artha aaguttade...illadiddare preeti iralu saadhyavilla allave?