Wednesday, September 18, 2024

ಪ್ರೀತಿ

ಮನಸು ಹುಚ್ಚು ಕುದುರೆಯಾಗಲು 
ವಯಸ ಲೆಖ್ಖವೇಕೆ ಬೇಕು? 
ಕನಸ ಕಾಣುವ ಮನಸಿಗೆ 
ಬೊಗಸೆ ಪ್ರೀತಿಯಷ್ಟು ಸಾಕು 

ಬಯಸಿ ಬಯಸಿ ಬರುವುದಿಲ್ಲ 
ಮನಕೆ ಈ ಚಂಚಲತೆ 
ಉಳಿಸಿ ಉಳಿಸೆ ಕೂಡುವುದಿಲ್ಲ 
ಚಂಚಲತೆಯ ರೋಚಕತೆ 

ಒಂದು ಹಕ್ಕಿ ಹಾಡು ಸಾಕು 
ಮನವು ತೇಲಿ ಹಾರಲು 
ಒಂದು ಮೆಚ್ಚುಗೆ ನೋಟ ಸಾಕು 
ಮನವು ಕರಗಿ ಜಾರಲು 

ಗಾಳಿಗೆದ್ದ ಪುಕ್ಕದಂತೆ 
ಪ್ರೀತಿಗೆ ಸಿಕ್ಕ ಮನಸು 
ಅದಕು, ಇದಕು, ಎಲ್ಲದಕೂ 
ತಿರುಗು, ಬಯಸು, ಕನಸು 

ಹೂವಿನಂತೆ, ಹಾಡಿನಂತೆ 
ಹಾಲಿನಂತೆ ಪ್ರೀತಿ
ಅದಕೆ ಯಾಕೆ ವಯಸ ಲೆಖ್ಖ 
ಈ ಭಯ ಫಜೀತಿ 

ಇರಲಿಬಿಡು ನಿನ್ನೊಳಗದು 
ನಿನ್ನ ಉಸಿರಿನಂತೆ 
ತರಲಿಬಿಡು ನಿನ್ನೊಳಗೆ 
ಗೌಜು, ಗದ್ದಲ, ಸಂತೆ 

ಭಾಶೇ 

No comments: