Tuesday, September 24, 2024

ಹಾಡದಿರು ಕೋಗಿಲೆ

ಹಾಡದಿರು ಕೋಗಿಲೆಯೇ 
ನೀ ಹಾಡಿದರೆ ನನಗೆ 
ನಮ್ಮೂರ ನೆನಪಾಗುವುದು 
ಕಣ್ಣೀರು ಹರಿಯುವುದು 

ಗೂಡಸೇರುವ ತವಕ 
ಮನವ ಕಲಮಲಿಸೆ 
ಓದುವುದೆಂತು ನಾನು 
ಏಕಾಗ್ರತೆಯು ಇಲ್ಲವಾಗಿರೆ 

ಅಮ್ಮನ ಮಮತೆಯ 
ಅಪ್ಪನ ಸಡಗರವ 
ಊರಮಣ್ಣಿನ ಕಂಪ 
ಮನವು ನೆನೆಯುವುದು 

ಹೇಮಾವತಿಯ ಜುಳು ಜುಳು 
ಸಂಜೆಯ ತಂಗಾಳಿ 
ಕೈ ಬೀಸಿ ಕರೆಯುತಿರೆ 
ನಾ ಇಲ್ಲಿ ಇರುವುದೆಂತು? 

ಹಾಡದಿರು ಕೋಗಿಲೆಯೇ ಹಾಡದಿರು 
ಹಾಡಿದರೂ ನನಗೆ ಕೇಳಿಸದಿರು 

ಭಾಶೇ 

No comments: