ಅವಶೇಷವಾಗಿಹೋಗಿದೆ ಆ ನೆನಪು
ಸುಗಂಧ ಮಾತ್ರ ಮನಸು ತುಂಬಿದೆ
ನೂರಾರು ಹಗಲುಗಳು, ನೂರಾರು ರಾತ್ರಿಗಳು
ಆ ಅನುಭವಕ್ಕಾಗಿಯೇ ಕಾದಿದ್ದೆ
ಅದು ಕಳೆದೇ ಹೋಗಿದೆ, ಗೊತ್ತಾಗದೆ
ಮಸುಕಾಗಿದೆ ಸುಂದರ ವರ್ಣಚಿತ್ರ
ಧೂಳುಮೆತ್ತಿ, ಜಿರಲೆ ತಿಂದು
ಮೂಲೆ ಸೇರಿದೆ, ಒರೆಸುವವರಿಲ್ಲದೆ
ಮರೆತೇ ಹೋದ ನೆನಪು
ನೆನಪಾಗಿ ಮರೆವ ಮರಸಿದೆ
ಮರೆಯಾಗಿ ನೆನಪ ಮಸುಕಾಗಿಸಿದೆ
ಹೂವು, ಅರಳಿ, ಉದುರಿ, ಮುಗಿದಾಯ್ತು
ಚಿತ್ರ, ಬಿಡಿಸಿ, ನಮಿಸಿ, ಮರೆಯಾಯ್ತು
ಅನುಭವ, ಒಂದು ಬಾರಿಯಲೇ ಬರಿದಾಯ್ತು
ಭಾಶೇ
No comments:
Post a Comment