Saturday, September 21, 2024

ವಿಪರ್ಯಾಸ

ವಾಸನೆಯ ಹೂಸುಗಳು ಸೊಳ್ಳೆ ಓಡಿಸುವಂತಿದ್ದಿದ್ದರೆ! 
ಉದ್ದು, ಕಡಲೆಗಳನೇ ಮೆಲ್ಲುತ್ತಿದ್ದೆ 
ಯಾರ ಇರವು, ಸಮಾಜದ ತೊಡಕಿಲ್ಲದೇ 
ಎಲ್ಲೆಲ್ಲೂ ಹೂಸು ಬಿಡುತ್ತಿದ್ದೆ 

ಕಣ್ಣೀರು ಮುಳೆಯ ಬರಿಸುವಂತಿದ್ದರೆ 
ಬೇಸಿಗೆಯಿಡೀ ಅಳುತ್ತಿದ್ದೆ 
ಪ್ಲಾಸ್ಟಿಕ್ ತಿಂದು ಅರಗಿಸಬಹುದಾದರೆ 
ಅನ್ನ ತಿನ್ನುವುದ ಬಿಡುತ್ತಿದ್ದೆ 

ಮಾತು ಮನೆಯ ಕಟ್ಟಬಹುದಾದರೆ 
ಶುಭನುಡಿಗಳನೇ ಆಡುತ್ತಿದ್ದೆ 
ಬೇಡಿದರೆ ವರ ದೊರೆಯುವಂತಿದ್ದರೆ 
ಸಮಾಜ ಕಲ್ಯಾಣವನೇ ಬೇಡುತ್ತಿದ್ದೆ 

ಏನೇನೂ ಮಾಡಲಾಗದಿದ್ದರೂ 
ಒಳ್ಳೆ ಯೋಚನೆಗಳನಾದರೂ ಮಾಡುತ್ತಿದ್ದೆ 
ಕೈಲಾಗುವುದೆಂದು ಹೊರಟು 
ಮಹಾಪಾತಕಗಳನೇ ಮಾಡುತಿರುವೆ 

ಭಾಶೇ 

No comments: