ಒಳಗೆ ನುಗ್ಗಿದ ಕಳ್ಳ
ನಿನಗೇನು ಶಿಕ್ಷೆ ಕೊಡಲಿ ನಾನು?
ಮನವ ಕದ್ದಿರುವೆ
ಹೃದಯ ಗೆದ್ದಿರುವೆ
ನೀನೇ ಆಗಿರುವೆ, ಭೂಮಿ, ಭಾನು
ಏನು ಹೇಳಲಿ ನಿನ್ನ ಪ್ರತಾಪ
ನೆನಪ ಸಾಗರವ ಆವರಿಸಿರುವೆ
ಹೃದಯ ಬಡಿತದ ಲಯ ಬದಲಾಗಿದೆ
ಊಟ ನಿದ್ದೆಗಳೂ ಕಷ್ಟ ನನಗೆ
ಕಣ್ಣ ರೆಪ್ಪೆಯ ಹಿಂದೆ ನಿನ್ನದೇ ರೂಪ
ಪ್ರತಿ ಉಸಿರಲ್ಲೂ ನಿನ್ನ ಘಮ
ನರನಾಡಿಯೆಲ್ಲಾ ನೀ ವೀಣೆ ಮಿಡಿದಂತೆ
ಕೇಳಿಸುವುದು ಬರೀ ನಿನ್ನ ಕೊಳಲಗಾನ
ನೀನೇ ಉತ್ತರ
ನೀನಿಟ್ಟ ಪ್ರಶ್ನೆಗೆ
ನನ್ನ ಹಿಡಿತದಲ್ಲೇನೂ ಇಲ್ಲ
ಮಾಂಗಲ್ಯ ಕಟ್ಟಿ
ಪರದೈವವೇ ಆಗಿಬಿಡು
ನೀ ಗುರು, ಗೆಳೆಯ, ನಲ್ಲ
ಭಾಶೇ
No comments:
Post a Comment