ಏಕಾತನತೆಯನ್ನ
ಸಮುದ್ರಗಳಲ್ಲೂ ಬೆಳೆಸಬಹುದು
ಕೂಪಮಂಡೂಕಗಳನ್ನ
ಕಾಲಿಗೆ ಕಟ್ಟುವ ಬೇಡಿಗೆ
ಲೋಹ ಯಾವುದಾದರೇನಂತೆ?
ತೆಳು ದಾರಗಳಲ್ಲೇ ನೇಯಬಹುದು
ದನಿ ಅಡಗಿಸುವ ಪರದೆ
ತಂತಿಯದಷ್ಟೇ ಅಲ್ಲ
ಮಾತಿನ ಬೇಲಿಗಳೂ ಇವೆ
ಭಯ ಮಾತ್ರವಲ್ಲ
ಪ್ರೀತಿಯ ಬಂಧನಗಳೂ ಇವೆ
ವಿಶ್ವದ ವೈಶಾಲ್ಯವನರಿಯಲು
ಒಳಗೊಂದು ಪ್ರಶ್ನೆಯಿರಬೇಕು
ಅಂಗೈಯೇ ವಿಶ್ವವಾದರೆ
ಮನದೂಳಗೂ ಅಪರಿಚಿತತೆಯಿರಬಹುದು
ಭಾಶೇ
No comments:
Post a Comment