Wednesday, August 14, 2024

ಕೊಟ್ಟು ತಗೊಂಡು

ಕೊಡದೆ ಪಡೆವುದು ಹೇಗೆ? 
ನೀ ಮಾತುಕೊಟ್ಟರೆ ನಾ ಸಮಯ ಪಡೆದು 
ಆಗಲೇ ತಾನೇ ಸಂಸಾರ? 

ಯಾರಿಗೆ ಕೊಡಲಿ, ಎಷ್ಟು, ಯಾತಕ್ಕೆ 
ಯಾರು ಕೊಡುವರು ಗಮನ ನನ್ನ ವಿಚಾರಕ್ಕೆ? 
ಕೊಟ್ಟು, ತರುವ ಲೆಖ್ಖಾಚಾರ 

ಬಳಕೆಯಿದ್ದರೆ ತಾನೇ ಬೇಕಾಗುವುದು? 
ಉಪಯೋಗಿಸದ ಸಾಮಾನುಗಳು 
ಧೂಳು ಹಿಡಿದು ತಾನೇ ಅಟ್ಟ ಸೇರುವುದು. 

ಅಭ್ಯಾಸವಾಗಬೇಕು, ಪದೇ ಪದೇ, ಅದೇ 
ಗೂಡಂಗಡಿಯ ಡಬ್ಬಿ ಜೋಡಿಸುವ ರೀತಿ 
ಮನ ತಪ್ಪಿದರೂ, ಕೈ ತಪ್ಪಲಾರದಂತೆ 

ಇದು ನಿನ್ನ ಪರಿಧಿಯಲ್ಲಿ ಇಲ್ಲ ಬಿಡು 
ಆಳ, ಅಗಲ, ವೇಗಗಳೆಲ್ಲ 
ಎಲ್ಲ ನದಿಗಳಿಗೂ ದಕ್ಕುವುದಿಲ್ಲ 

ಭಾಶೇ 

No comments: