Friday, August 23, 2024

ಅಷ್ಟೇ

ಲೈಂಗಿಕವಾಗಿ ಅತ್ಯಾಚಾರಮಾಡಿ 
ಕೊಂದು ಬಿಸುಟ 
ಅಪ್ಪಂದಿರಿದ್ದಾರೆ 
ಸಹೋದರರಿದ್ದಾರೆ 
ಗೆಳೆಯರಿದ್ದಾರೆ
ಪ್ರೇಮಿಗಳಿದ್ದಾರೆ
ಪತಿಯರೂ ಇದ್ದಾರೆ 
ಚಿಕ್ಕಪ್ಪ, ದೊಡ್ಡಪ್ಪ, ತಾತ, ಮಾವಂದಿರೂ 

ಸಂಬಂಧಗಳು ತಡೆಯಲ್ಲ 
ರಕ್ತದ್ದೂ, ಮಾಡಿಕೊಂಡದ್ದೂ 

ಅನುಮತಿಯಿಲ್ಲದೆ ಮುಟ್ಟಬಾರದು 
ಶಿಕ್ಷಿಸಲು 
ರಕ್ಷಿಸಲು 
ಪ್ರೀತಿಯಿಂದ 
ಕೋಪದಲ್ಲಿ 
ಏನೇ ಆದರೂ 

ಅನುಮತಿಯಿಲ್ಲದೆ ಮುಟ್ಟಬಾರದು 

ಅಷ್ಟೇ. 

ಭಾಶೇ 

No comments: