ನಿನ್ನ ಪ್ರೇಮ ಸುಧೆಯ ಕುಡಿಯಲರ್ಹರ್ಯಾರ್ಯಾರು?
ಹುಟ್ಟಿ ಎರಡು ವರ್ಷದಲ್ಲೇ ಎಷ್ಟು ಮಾತು ಓಡಾಟ
ಕುಣಿದು, ನಲಿದು, ಅತ್ತು, ಕರೆದು, ಕಳೆದು ಎಷ್ಟು ಹುಡುಕಾಟ
ತಬ್ಬಿಕೊಂಡು ಮುತ್ತನೀವೆ ಪ್ರೀತಿಯಿಂದ ಹಲವೊಮ್ಮೆ
ಹೊಡೆದು, ಪರಚಿ, ಕಚ್ಚಿಬಿಡುವೆ, ಕೋಪದಿಂದ ಕೆಲವೊಮ್ಮೆ
ನಿನ್ನ ಜೊತೆ ಇದ್ದರೆ ಸಾಕು ಸಮಯಕಳೆದು ಹೋಗಲು
ನನ್ನ ಬದುಕು, ನನ್ನ ಆಸೆ, ಎಲ್ಲ ನೀನೆ ಮೊದಲು
ಯಾವ ಪುಣ್ಯಕ್ಕೆ ನನಗೆ ಇಂಥಾ ಭಾಗ್ಯ ಲಭಿಸಿತು
ನೀನು ನನ್ನ ಬಾಯತುಂಬಾ ಅಮ್ಮಾ ಎಂದು ಕರೆದದು
ನಂಗೆ ಸಿಗದ ನಾಳೆಗಳನು ನೀನು ನೋಡಿ ಅನುಭವಿಸು
ಒಳ್ಳೆವನಾಗು, ಜೀವನದಲ್ಲಿ, ಭವಿಷ್ಯವನ್ನು ಬದಲಾಯ್ಸು
ಮುತ್ತಿನಂತಾ ಘಳಿಗೆಗಳಿವು ಸದಾ ಕಾಲ ಉಳಿಯಲಿ
ನಿನ್ನ ಮೇಲೆ ನನ್ನ ಪ್ರೀತಿ ಎಂದೂ ಸದಾ ಬೆಳೆಯಲಿ
ಸೌಮ್ಯಶ್ರೀ ಗೋಣೀಬೀಡು
No comments:
Post a Comment