ತಿನ್ನಲು ಕಾರಣಗಳು ಹಲವಾರು
ತಿನ್ನುತ್ತಾ ಕೂತರೆ ಹಂಡೆಗಳು ಮುಗಿದಾವು
ಮುಗಿಯಲೊಲ್ಲದು ಮನದ ಬೇಜಾರು
ತಿಂದು, ತಿಂದೇ ಹೊಟ್ಟೆ ಕಟ್ಟಿ ಹಾಳಾಗಿ
ಕಕ್ಕಸ್ಸಿನಲ್ಲಿ ಬರೀ ಸರ್ಕಸ್ಸು
ತುಂಬಿದ ಹೊಟ್ಟೆಯನಿನ್ನೂ ತುಂಬುತ್ತಾ ಹೋದರೆ
ಮೈ, ಮನದ ಆರೋಗ್ಯಕ್ಕೆ ಆಪತ್ತು
ಹೊಟ್ಟೆಗೇ ಗೊತ್ತಿದೆ ಅದೆಷ್ಟು ಬೇಕೆಂದು
ಮನದ ಮಾತ ಕೇಳಿ ತಿನ್ನಬಾರದು
ದೇಹಕ್ಕೇ ಇದೆ ಅದರ ಬುದ್ಧಿವಂತಿಕೆ
ಬುದ್ಧಿಯ ಕೈಗೆ ಹಿಡಿತ ಕೊಡಬಾರದು
ಹೊಟ್ಟೆ ತುಂಬಿದಾಗ ಅಮೃತವೂ ರುಚಿಸಲ್ಲ
ಬೇಡವಾದ್ದು ಅರಗುವುದು ಹೇಗೆ?
ದೇಹಕ್ಕೆ ಪುಷ್ಟಿ, ಮನಕೆ ಸಂತೃಪ್ತಿ
ಕೊಡದ ಊಟ, ಊಟ ಹೇಗೆ?
ಭಾಶೇ
No comments:
Post a Comment