Tuesday, June 18, 2024

ಕ್ಷಮಿಸು

ನಾ ಮಾಡಿದಾ ತಪ್ಪ 
ಕ್ಷಮಿಸದಿರೆಯಾ ಗೆಳತಿ 
ನಮ್ಮ ಸ್ನೇಹದ ಸಲುಗೆಯಲಿ 

ನಿನಗಿತ್ತ ಆ ನೋವು 
ನನ್ನನೂ ಕೊರೆಯುತಿದೆ 
ನನ್ನ  ಮನಸಿನ ಆಳದಲಿ 

ನನ್ನ ಅಭಿಪ್ರಾಯವ 
ನಿನ್ನ ಮೇಲೆ ಹೇರುವ 
ಭಾರದ ತಪ್ಪನ್ನು ಮಾಡಿರುವೆನು 

ನಿನ್ನ ಸ್ನೇಹವೆಲ್ಲಿ 
ಕಳಚಿ ಹೋಗುವುದೂ ಎಂದು 
ಭಯದಿ ಪಶ್ಚಾತ್ತಾಪ ಪಟ್ಟಿರುವೆನು 

ನನಗಿತ್ತ ಪ್ರೀತಿಯ 
ಕಿತ್ತುಕೊಳ್ಳದಿರು ಗೆಳತಿ 
ನನ್ನ ಮನ್ನಿಸಿ ಸ್ನೇಹ ಉಳಿಸು 

ಭಾಶೇ 

No comments: