ಬೇರೂ ಬೆಳೆದಿತ್ತು
ಕಿತ್ತು ಬರುವಂತೆ ಒಂದು ಮುಖ್ಯ ರಸ್ತೆ
ಓಡುವ ಗಾಡಿಗಳ
ವೇಗ ನಿಯಂತ್ರಿಸಿ
ತನ್ನ ಇರುವಿಕೆಯ ತೋರಿಸಿತ್ತು
ಹಾರುವವರೇ ಎಲ್ಲ
ಹಗಲೂ, ಇರುಳೂ
ಕಣ್ಮುಚ್ಚಿ ತೆಗೆವಲ್ಲಿ ಮೈಲಿ ಕ್ರಮಿಸಿ
ನಿಂತರು ಒಮ್ಮೆಲೇ
ಬೇರಿರುವ ರಸ್ತೆಯಲಿ
ನಾಗಾಲೋಟದ ಕುದುರಿಗಳ ಒಮ್ಮೆ ರಮಿಸಿ
ಸುದ್ದಿಯಾಯಿತು ಬೇರು
ನಿದ್ದೆ ಬಿಟ್ಟಿತು ಮರ
ಈ ಬದಿಯಿಂದಾಬದಿಗೆ ಉಬ್ಬಿ ಬರಲು
ಬಂದರು ಕಾರ್ಮಿಕರು
ಮರವ ಕಡಿದುರುಳಿಸಲು
ತಡೆವ ಬೇರಿನ ಜೀವ ಒಮ್ಮೆಲೇ ತೆಗೆಯಲು
ಮುರಿದು ಬಿದ್ದಿತು ಮರ
ಬರಿದೊಂದೆ ನೆನಪಾಗಿ
ಒಣಗೋ, ಕೊಳೆತೋ ಬೇರು ಮಣ್ಣಾಯಿತು
ಮತ್ತೋಡಿದರು ಜನರು
ಕಣ್ಣ ಪಟ್ಟಿ ಕಟ್ಟಿ
ಮರವಿದ್ದುದೇ ಅವರಿಗೆ ಮರೆತ್ಹೋಯಿತು
ಭಾಶೇ
No comments:
Post a Comment