Saturday, June 15, 2024

ವಿನಾಷಕಾಲೇ

ಯಾದವ ವಂಶಸ್ತರಾಗಿದ್ದೇವೆ 
ಅರಾಜಕತೆ ತಾಂಡವವಾಡುತ್ತಿದೆ 
ಧರ್ಮದ ಅಭಯ ಹಸ್ತದ ಕೆಳಗೆ 
ಅಧಾರ್ಮಿಕ ಕೆಲಸವೇ ನಡೆದಿದೆ 

ಬಡಿದಾಡಿಕೊಂಡು ಸಾಯುವುದೇ ಭವಿಷ್ಯ 
ಬಡಿದಾಟವೂ ಶುರುವಾಗಿದೆ 
ರಷ್ಯಾ, ಇರಾನ್, ಹಮಾಸ್, ಆಫ್ರಿಕ 
ಹುಲ್ಲುಕಡ್ಡಿಗಳೇ ಗುಡ್ಡಗಳಾಗಿವೆ 

ವಿನಾಷಕಾಲೇ ವಿಪರೀತ ಬುದ್ಧಿ 
ನಾವೂ ವಿಪರೀತಕ್ಕೇ ಬಂದಿದ್ದೇವೆ 
ಯಾಂತ್ರಿಕವಾಯ್ತು, ಕೃತಕವೂ ಆಯ್ತು 
ಇನ್ನು ವಿನಾಷವಷ್ಟೇ ಬಾಕಿ 

ಭೂಮಿ, ಸೂರ್ಯ, ಚಂದ್ರ, ತಾರೆಯರೂ 
ಒಂದಲ್ಲಾ ಒಂದು ದಿನ ಅಳಿವರಷ್ಟೇ 
ನಮ್ಮ ಸಾವು ಬಾಗಿಲಿಗೆ ಬಂದಾಗಿದೆ 
ಹತ್ತಾರು ವರ್ಷ ಉಳಿವುದೇ ನಮ್ಮ ಕುಲ? 

ಭಾಶೇ 

No comments: