ಮಾತಿನಲ್ಲಿ, ಹಾಡು, ನೃತ್ಯ, ನಾಟಕದಲ್ಲಿ
ಅವಳು ಮೊದಲು
ಹುಡುಗನ ಕೈ ಹಿಡಿದಳು
ಐ ಲವ್ ಯೂ ಎಂದಳು
ತುಟಿಗೆ ತುಟಿ ಒತ್ತಿದಳು
ಅವನಿಗದು ಮೊದಲಸಲ
ಅವಳಿಗಲ್ಲ
ಹಸಿವನ್ನು ಅರಿತವಳು
ಉಂಡಳು ಊಟ ಸಿಕ್ಕಲ್ಲಿ
ಮನಸಿನ ಹಾರಾಟಕ್ಕೆ
ಸಮಾಜದ ಬೇಲಿ ಹಾಕದವಳು
ಭಯವಿಲ್ಲದವಳು
ಹೂವಲ್ಲ, ಚಿಟ್ಟೆ, ದುಂಬಿ ಅವಳು
ಪ್ರೀತಿಗಾಗಿ ಕಾದವಳಲ್ಲ, ಅರಸಿದವಳು
ಬಯಕೆಗಳ ಮಾತು ಕೇಳಿದವಳು
ತನಗೆ ತಾ ಸುಳ್ಳು ಹೇಳದವಳು
ಆತ್ಮಶುದ್ಧಳು
ಅತ್ತವಳು, ನಕ್ಕವಳು
ಮೋಸಹೋದವಳು, ಪಾಠಕಲಿತವಳು
ಕಾಲಲ್ಲಿ ಬೇರು, ಕೈಯಲ್ಲಿ ರೆಕ್ಕೆ
ತನ್ನತನವ ಕಂಡುಕೊಂಡವಳು
ಮನುಷ್ಯಳು
ಭಾಶೇ
No comments:
Post a Comment