ಎಲ್ಲ ಪ್ರಶ್ನೆಗಳಿಗೂ
ಧರ್ಮ ಉತ್ತರವಾಗಿ
ಎಲ್ಲ ಉತ್ತರಗಳಿಗೂ
ಧರ್ಮ ಪ್ರಶ್ನೆಯಾಗಿ
ಒಡೆಯುತ್ತಿದೆ ಮನಗಳ
ಸೃಜಿಸುತ್ತಿದೆ ಕಂದಕಗಳ
ಎಲ್ಲಿಹೋಯಿತು
ವಿವಿಧತೆಯಲ್ಲಿ ಏಕತೆ?
ಸಾಮರಸ್ಯ?
ಸೋದರಿಕೆ?
ಏಕೆ ಅಳಿಯಿತು
ನಮ್ಮವರೆಂಬ ನಂಬಿಕೆ?
ಪರಶಕ್ತಿಯಾವುದೂ
ಒಗ್ಗೂಡಿಸಲಾರದು
ಒಡೆದು ಆಳುವ ಬುದ್ಧಿಯ
ಪರಕೀಯರು ಹೋದರೂ
ಅವರು ನೆಟ್ಟ ಪರಕೀಯತೆ
ಇನ್ನೂ ಮನದಿಂದ ಅಳಿಯದೇಕೆ?
ಒಳಜಗಳಗಳ ಬೆಂಕಿಯಬೀಜ
ಶಾಂತಿಯ ಹೂ ಬಿಡುವುದಿಲ್ಲ
ಸುಡುವ ದಾವಾನಲ
ಜಾತಿ, ಧರ್ಮಕ್ಕೆ ಬಾಗುವುದಿಲ್ಲ
ದ್ವೇಷದಿ ಹತರಾಗುವ ಮುನ್ನ
ಎಚ್ಚತ್ತುಕೊಳ್ಳುವೆವೇ ನಾವು?
ಸೌಮ್ಯಶ್ರೀ ಗೋಣೀಬೀಡು.
No comments:
Post a Comment