Tuesday, May 14, 2024

ಮಳೆಗಾಲದ ರಂಗೋಲಿ

ಭೂಮಿಯ ಲೇಖನಿಯಲ್ಲಿ 
ಮಸಿಯೇನೂ ಮುಗಿದಿಲ್ಲ 
ಮನುಕುಲದ ಆಯಸ್ಸು ಮುಗಿಯಲಿ, ಅಷ್ಟೇ! 

ಸಣ್ಣ ಯುದ್ಧಗಳೇಕೆ ಇನ್ನು? 
ಸಿಡಿಯಲಿ ಎಲ್ಲಾ ಅಣುಬಾಂಬುಗಳು 
ಕೊನೆಯಾಗಲಿ ಒಂದು ಅಧ್ಯಾಯ 

ಯುದ್ಧದಿ ಒಬ್ಬ ವೀರೆ ಮಡಿದರೂ 
ಓರ್ವ ನಾಗರೀಕನ ಹತ್ಯೆಯಾದರೂ 
ನಾವೆಲ್ಲಾ ಸತ್ತಂತೇ ಅಲ್ಲವೇ? 

ನಮ್ಮ ಬೆಚ್ಚನೆ ಮನೆಗಳಲ್ಲಿ 
ಇರುವ ನಿರಾತಂಕ ಮನಗಳಲ್ಲಿ 
ನಿಟ್ಟುಸಿರಾದರೂ ಹೊಮ್ಮೀತೇ? 

ಯುದ್ಧ, ಯುದ್ಧ, ಯುದ್ಧ 
ಸಾವು, ಸಾವು, ಸಾವು 
ಅನ್ಯಾಯಕ್ಕೆ ಕೊನೆಯೆಲ್ಲಿ? 

ಮಹೋರಗಗಳು ಅಳಿದಂತೆ 
ಕೊನೆಯಾಗಲಿ ನರಕೋಟಿ 
ತಾಪಮಾನ ಬದಲಾವಣೆಯಂತೂ ಕೊಲ್ಲಲಿದೆ 

ಭೂಮಿಯ ಶಕ್ತಿಗೆ, ಆಯಸ್ಸಿಗೆ, 
ಸೂರ್ಯ ಇರುವವರೆಗೂ ಅವಕಾಶವಿದೆ 
ನಾವು ಮಳೆಗಾಲದ ರಂಗೋಲಿಯಷ್ಟೇ. 

ಸೌಮ್ಯಶ್ರೀ ಗೋಣೀಬೀಡು. 

No comments: