Monday, May 20, 2024

ವಿಪರೀತ

ದೇವರಿದ್ದಾನೆಂದೇ ನಂಬಲಿಲ್ಲ 
ಅವ ಕಾವನೆಂದು ಅಂದುಕೊಳ್ಳಲಿ ಹೇಗೆ? 

ನಗುವ, ಕುಣಿವ ನನ್ನ ಹಸುಳೆಗಳ 
ಬದುಕಬಗ್ಗೆ ಆತಂಕಿಸುತ್ತೇನೆ 

ಜಾಸ್ತಿ ನಕ್ಕರೆ, ಅಳುವರೆಂದು 
ಘಾಡ ನಿದ್ದೆಯಲೇ ಸತ್ತರೆಂದು 
ರಸ್ತೆ, ಕಾರು, ಹಾವು, ನಾಯಿ,
ಮನುಷ್ಯರೂ ಶತ್ರುಗಳೆಂದು, ಗಾಭರಿಬೀಳುತ್ತೇನೆ 

ನನ್ನ ದೇಹ ಒಳಗೇ ಗೆದ್ದಲುತಿಂದು 
ಕುಂಬಾಗಿದೆಯೆಂದು ಹೆದರುತ್ತೇನೆ 

ಖುಷಿಯಿರುವ ನನ್ನ ಬಾಳಲಿ 
ದುಃಖದ ಮೋಡ ಕವಿಯುವುದೆಂದು 
ನನ್ನ ತನುವ ಪಂಜುಮಾಡಿ 
ನನ್ನನೇ ಉರಿಸಿ 
ದಾರಿದೀಪವಾಗಬೇಕಾಗತ್ತೆಂದು 
ಇರದ ಹಾದಿಗಳ 
ಚಿತ್ರ ಬರೆಯುತ್ತೇನೆ 

ದೇವರಿದ್ದರೂ, ಇಲ್ಲದಿದ್ದರೂ, 
ನನ್ನ ಪರವಂತೂ ಇಲ್ಲವೆಂದು 
ನಂಬಿ ದುಃಖಿಯಾಗುತ್ತೇನೆ 

ಭಾಶೇ

No comments: