Thursday, May 30, 2024

ಕೊಳಚೆಗೆ ಗಂಗೆ

ಆಕಾಶದಿಂದ ನೀನಿಳಿದು ಬಂದಾಗ 
ಹಲವು ರೀತಿಯ ಸ್ವಾಗತ 
ಮರದೆಲೆ, ಹೂದಳಗಳ ಅನುರಾಗ 
ತ್ಯಾಜ್ಯ, ಉಚ್ಚಿಷ್ಟದ ದುರ್ನಾತ 

ಭೇದವಿಲ್ಲದೆ ಇಳಿದೀ ಇಳಿಯುತ್ತೀಯ 
ಬಡವನ ನೆತ್ತಿಗೆ, ಸಿರಿವಂತನ ಚರಂಡಿಗೆ 
ಸಿಕ್ಕಿದ್ದ ಕೊರೆಯುತ್ತೀಯ, ಮೆರೆಯುತ್ತೀಯ 
ಬೆರೆಯುತ್ತೀಯ ಹೂತಿಟ್ಟ ಗಡಂಗಿಗೆ 

ಬರುವಾಗ ಸ್ವಚ್ಛ, ಸ್ಪಟಿಕ ಶುದ್ಧ 
ಬೆರೆತಂತೆ ಕಳೆದು ಮೂಲ ರೂಪ 
ತಗ್ಗಿನ ಸಾಗರಕ್ಕೆ ನಿನ್ನ ನಿಷ್ಟೆ ಬದ್ಧ 
ಹನಿಗೂಡಿದಾಗ ರುದ್ರ ಪ್ರತಾಪ 

ನಮ್ಮ ಕೊಳಚೆಗೆ ಇಳಿದು ಬರುವ ಗಂಗೆ 
ನೀ ಬಿದ್ದ ಒಂದು ಕ್ಷಣ, ಗಟರೂ ಪಾವನ 
ದಾಹ ನೀಗಿ ಜೀವ ನೀಡುವೆ ನೀ ನಮಗೆ 
ನಿನ್ನ ಸದ್ಬಳಕೆಯಿಂದ ಮಾತ್ರ ಜೀವನ 

ಭಾಶೇ 

No comments: