ಅದೇನು ಕಷ್ಟವೇ ಪಾಲಿಸಲು?
ಅನುಮತಿಯಿಲ್ಲದೆ ಬಳಿಸಾರಬೇಡ
ಹಿಡಿಯಬೇಡ, ಮುಟ್ಟಬೇಡ, ಆಲಂಗಿಸಬೇಡ
ಸಮ್ಮತಿ ಇಲ್ಲದೇ ವಿವಸ್ತ್ರಗೊಳಿಸಬೇಡ
ಕಾಡಬೇಡ, ಬೆತ್ತಲಾಗಬೇಡ, ಚುಂಬಿಸಬೇಡ
ಒಪ್ಪಿಗೆ ಪಡೆಯದಲೇ ತೂರಿಸಬೇಡ
ಬಾಯಿ, ಕೈ, ಗುದ, ಅಥವಾ ಯೋನಿಯೊಳಗೆ
ಅಧಿಕಾರವ ದುರುಪಯೋಗಿಸಬೇಡ
ಕೆಲಸ, ಭಡ್ತಿಯ, ಯೋಗ್ಯ, ಅಯೋಗ್ಯರಿಗೆ ಕೊಡಲು
ಹಣದ ಬಲದಿ ಮುಂದುವರಿಯಬೇಡ
ಕಂಡವರನ್ನೆಲ್ಲಾ ಭೋಗಿಸುವೆನೆಂದು ತಿಳಿದು
ನಿನ್ನ ಶಿಷ್ನವ ಆಯುಧವೆಂದುಕೊಳ್ಳಬೇಡ
ಎಂದೂ ಸೋಲದೆ, ಸಾಯದೆ, ಅಭಿಚಾರಿಸುವೆನೆಂದು
ಅತ್ಯಾಚಾರಿಯಾಗಬೇಡ. ಅಷ್ಟೇ!
ರೂಪ, ಹಣ, ಅಧಿಕಾರ ಎಷ್ಟೇ ಇದ್ದರೂ
ಗುಣ, ಕೆಲಸ, ಮೌಲ್ಯಗಳ ಕೈ ಬಿಡದೆ
ಬೇಕು, ಬೇಡದ ನಡುವಿನ ವ್ಯತ್ಯಾಸ ತಿಳಿದು
"ಬೇಕು" ಭಯ, ಒತ್ತಾಯ ಮುಕ್ತವಾಗಿರಬೇಕೆಂದು ಅರಿತು
ಅಸಹಾಯಕರ, ಅಮಾಯಕರ ಬೇಡವ ಬೇಕಾಗಿಸಿ
ಅದು ಅತ್ಯಾಚಾರವಲ್ಲ ಎಂದು ತಿಳಿಯಬೇಡ
ಸೌಮ್ಯಶ್ರೀ ಗೋಣೀಬೀಡು.
No comments:
Post a Comment