ನಗುನಗುತಾ ಇರುವವನು
ಪ್ರೀತಿಯನು ಕೊಟ್ಟು, ಪ್ರೀತಿಯನು ಪಡೆದು
ಪ್ರೀತಿಯನೆ ಬೆಳೆವವನು
ಖುಷಿಯ ಅಲೆ ಉಕ್ಕಿ,ಸಂತೋಷ ಸೊಕ್ಕಿ
ನೆಮ್ಮದಿ ತರುವವನು
ಪ್ರೇಮದಲೆ ನೀಡಿ, ಕನಸಿನಲಿ ಕಾಡಿ
ಮನಕೆ ಮುದ ಕೊಡುವವನು
ನೆನಪಿನಂಗಳದಲ್ಲಿ ಪ್ರೀತಿರಂಗೋಲಿ
ಬರೆದು ಬಣ್ಣ ಹಚ್ಚಿದನು
ಮನದರಮನೆಯಲ್ಲಿ ಇರುಳೂ, ಹಗಲೂ,
ಪ್ರೀತಿ ಹಂಚುವವನು
ಪ್ರೀತಿಕಡಲಲ್ಲಿ, ಆಸೆ ಅಲೆ ಚೆಲ್ಲಿ,
ಚಂದ್ರಮನಾಗುವನು
ಪ್ರತಿದಿನವೂ, ಪ್ರತಿಕ್ಷಣವೂ,
ಉಸಿರು ನೀಡುವವನು
ಹಿತನಗುವಿನಲ್ಲಿ, ಮೃದುಮಾತಿನಲ್ಲಿ
ಮನವ ಸೆಳೆದವನು
ಹೃದಯ ಕದ್ದವನು, ಮನವ ಗೆದ್ದವನು
ಎಂದಿದ್ದರೂ ಅವನು ನನ್ನವನು
ಹೇಗಿದ್ದರೂ ಅವನು ನನ್ನವನು
ಎಲ್ಲಿದ್ದರೂ ಅವನು ನನ್ನವನು
ಅವನು ನನ್ನವನು
ಭಾಶೇ
No comments:
Post a Comment