ಇರಲಾರೆ, ಹೋಗಲಾರೆ, ಬಾಳಲಾರೆ
ನಾನೇನಾಗಿದ್ದೆನೋ ಅಲ್ಲೇ ಶುರು
ನಾನೇನಾಗುವೆನೋ, ಅದೇ ಗುರಿ
ನಾನೆಲ್ಲವನೂ ಅರಿಯಲಾರೆ
ಜ್ಞಾನದ ಸಮುದ್ರ ದಡದಲ್ಲಿ
ಬೇಲಿ ಎಷ್ಟು ದಬ್ಬಿದರೂ
ವಿಸ್ತಾರದಿ ಕಳೆದೇ ಹೋಗುವೆನು
ನಾನೆಲ್ಲವನೂ ನೋಡಲಾರೆ
ಭೂಮಿ ಬಹಳ ವಿಶಾಲ
ಕಲೆ, ವಿಜ್ಞಾನ, ಅಪಾರ
ಭೂಮಿಯಾಚೆಗೂ ಇದೆ ಬಹಳಷ್ಟು
ಅವಕಾಶಗಳಿಗೂ ಮಿತಿಯಿಲ್ಲ
ನಾಳೆಗಳಲ್ಲಿ ಸಾಕ್ಷಾತ್ಕಾರವಾಗಲು
ನನಗೆ ಗೊತ್ತಿಲ್ಲವೆಂದು ಗೊತ್ತಿದ್ದರೆ
ಗೊತ್ತುಮಾಡಿಕೊಳ್ಳಲು ಸಾಧ್ಯ
ಇರಲಿ ಒಂದು ಹೃತ್ಪೂರ್ವಕ ಧನ್ಯವಾದ
ಆಗಿರುವುದಕ್ಕೆ, ಅರಿತಿರುವುದಕ್ಕೆ
ಸ್ವಲ್ಪ ಹೆಮ್ಮೆ, ಖುಷಿ, ಪ್ರೀತಿಯಿರಲಿ
ನಾಳೆಗಳ ಸುಸ್ವಾಗತಿಸಲಿಕ್ಕೆ
ಭಾಶೇ
No comments:
Post a Comment