ಬಾಗಬಾರದ್ದಕ್ಕೆ ಬಾಗಿ, ಹೆದರಬಾರದ್ದಕ್ಕೆ ಹೆದರಿ
ವರ್ಷಾನುಗಟ್ಟಲೆ ಅಂಗಾತ ಮಲಗಿ
ಈಗ ಏಳುವುದ, ಕೂರುವುದ, ಮರೆತಿರುವೆನೇ?
ತರಗೆಲೆಯಂತೆ ತೂರಿ ಹೋಗಾಯ್ತು
ಮರದಂತೆ ಬೇರೂರಿ ನಿಂತಾಯ್ತು
ಬೆಳೆದು, ಕರಗಿ, ಕೊಳೆತು, ಹರಡಿ
ಒಂದೇ ಬಾಳಿನಲಿ ಅದೆಷ್ಟು ಪಾತ್ರ
ಮಾತುಗಳು ಗಾಳಿಯಲಿ ಕರಗಿಹೋಗಿವೆ
ಮರದ ಮೇಲಿಂದ ಹಕ್ಕಿಗಳು ಹಾರಿ ಹೋದಂತೆ
ಬೋಳು ಮರವ ನೋಡುತ್ತಾ ನಿಂತಾಗ
ಒಳಗಿನ ಸವಿಯಾದ ಕರೆಯ ಕಡೆಗಣಿಸಿರುವೆನೇ?
ತಪ್ಪುಗಳ ಒಪ್ಪುತ್ತಿರುವುದಾದರೆ ನಾ ಕಲಿಯುತ್ತಿರುವೆನೇ?
ನನ್ನದೇ ನಿರ್ಧಾರಗಳಲಿ ಭಂದಿಯಾಗಿರುವೆನೇ?
ಬದುಕುವುದು ಇದೇ ಆದರೆ, ಅದ ನಾ ಮರೆತಿರುವೆನೇ?
ಇನ್ನು ಎದ್ದು, ಕೂತು, ಒಂದುದಿನ ನಾ ನಿಲ್ಲುವೆನೇ?
ಭಾಶೇ
No comments:
Post a Comment