Saturday, July 27, 2024

ಪ್ರತಿಫಲನ

ಕಣ್ತೆರೆದೆ 
ಬೆಳಕಿತ್ತು 
ಮುಖ ವಕ್ರವಾಯ್ತು 
ಸುತ್ತಲೂ ವಕ್ರತೆಯೇ ಕಾಣ್ತು 
ಕೋಪ ಬಂತು 
ಸುತ್ತಲೂ 
ತಕ ಥೈ, ತಕ ಥೈ 

ಕೋಪವಿರದ ಸ್ಥಿತಿಯೇ ಪ್ರೀತಿ 
ಅಷ್ಟೇ
ಸಾವಿರ ಅಡಿ ಕೊರೆದರೂ 
ಇಲ್ಲ ಒಂದಿಂಚು ನೀರೂ 
ಈ ಬೋರುವೆಲ್ಲು 
ಫೇಲ್ಯೂರು 
ಕಡೆಗೆ ಕೋಪವೂ ಪ್ರೀತಿಯೇ! 

ವಾಸನೆಯ ಹೂಸು 
ಮನುಷ್ಯರನ್ನೋಡಿಸುವಂತೆ 
ಸೊಳ್ಳೆಗಳ ಓಡಿಸಬಾರದಾ? 

ನನ್ನ ಮನುಷ್ಯತ್ವ ಸೋರಿಹೋಗಿದೆ 
ನಿನ್ನಲಿ ಮೃಗವನಷ್ಟೇ ಕಾಣುವೆ 
ತಕ ಥೈ, ತಕ ಥೈ, ತಕ ಥೈ 

ಸಿಹಿನೀರ ಸರೋವರವೊಂದು ಸಿಕ್ಕರೆ 
ಮುಳುಗೇಳಬೇಕು ಮೂರು ಬಾರಿ 
ಎದೆತುಂಬ ಉಸಿರು ತುಂಬಿ 
ಚಿಗುರಿದರೆ ಮೈ, ಮನ 
ಮತ್ತೆ ಬರಬಹುದು ಆಶಿಸುವ ಗುಣ 

ಭಾಶೇ 

No comments: