ನಾಳೆ, ನಾನ್ಯಾರೋ, ನೀನ್ಯಾರೋ
ಗುಂಡಗಿದೆ ಧರಿತ್ರಿ
ಮತ್ತೆ ಬರುವುದು ಜಾತ್ರೆ
ಬರುವವರು ಬರಲಿ
ಇರುವವರು ಇರಲಿ
ಬಂದವರೂ, ಇದ್ದವರೂ
ಹೋಗುವುದೇ ಕಡೆಗೆ
ಮಳೆಗಾಲದ ಹೊಸನೀರಂತೆ
ಹಳತು, ಹೊಸತಾಗಿ ಬೆರೆತು
ನಾವೂ ಅಂತೆಯೇ ಅಲ್ಲವೇ
ಬದಲಾದ ಕಾಲಕ್ಕೆ ಒಗ್ಗುತ್ತಾ
ಯಾವುದೂ ಮರೆಯಾಗದೇ
ಇರಬಹುದೇ ಮೆದುಳ ಮೂಲೆಯಲಿ?
ಹೊಸ ನೆನಪು ತುಂಬಿದಂತೆ
ಬಳ್ಳಿ ತಾನಾಗೇ ಹಬ್ಬುತ್ತದೆ
ಲಾಭವೂ, ನಷ್ಟವೂ, ದೃಷ್ಟಿಯದಷ್ಟೇ
ಒಬ್ಬರ ಲಾಸು ಇನ್ನೊಬ್ಬರ ಕನಸು
ಒಂದೊಟ್ಟಿಗಿನಿಂದ ನೋಡುವಾಗ
ಪರಿಪೂರ್ಣತೆಯಷ್ಟೇ ಕಾಣುತ್ತದೆ
ಭಾಶೇ
No comments:
Post a Comment