ತಂಗಾಳಿ ಸೇವಿಸಿ ಬರೋಣವೇ?
ಹೊರಟಿದ್ದಾರೆ ವೃದ್ಧ ದಂಪತಿ ಇದುವೇ
ಯೌವನದಲ್ಲಿ ಕೈ ಹಿಡಿಯಲಿಲ್ಲ
ಈಗ ಇಬ್ಬರಿಗೂ ಆಸರೆ ಬೇಕಲ್ಲ
ಅವಶ್ಯಕತೆಗಿಂತ ದೊಡ್ಡ ಅನುರಾಗವಿಲ್ಲ
ನಿಧಾನಕ್ಕೆ ಕಾಲೆಳೆಯುತ್ತಾ ಮನೆ ಸುತ್ತಾ
ಒಂದೇ ರಸ್ತೆಯಲೇ ಹಿಂದು ಮುಂದೆ ತಿರುಗುತ್ತಾ
ಗುರಿ ಮುಟ್ಟಿದ ಮೇಲೆ ದಾರಿ ವ್ಯರ್ಥ
ಅತಂತ್ರವೋ ಇಲ್ಲಾ ಸ್ವತಂತ್ರವೋ ಇದು?
ಕಾಲಿಗೆ ಕತ್ತಲೆಯೇ ತೊಡರಿಕೊಂಡದ್ದು
ದೀಪದ ಗುಂಡಿ ದೂರದಿ ಇಟ್ಟಿದ್ದು
ಕಡ್ಡಾಯ ಏಕಾಂತ, ಬದಲಾವಣೆ ಅಪರಿಚಿತ
ಎಂದಾದರೂ ಒಮ್ಮೆ ಔತಣದ ಸ್ವಾಗತ
ದಂಪತಿಯ ದಿನಚರಿ ಪುನರಾವರ್ತಿತ
ಸಂಜೆ ಹತ್ತಿ ಬೇಗನೇ ಆರುವ ದೀಪಗಳು
ಹಗಲೇ ಕಡಿಮೆ, ಜಾಸ್ತಿ ಇರುಳು
ಯೌವನದಿ ನಗುವ ನಮಗೆ ಅರಳು ಮರಳು
ಭಾಶೇ
No comments:
Post a Comment