Tuesday, July 9, 2024

ಕಿಟಕಿ

ಬಾಳ ಹಾದಿಯಲಿ ಹತ್ತು ಹಲವು ನೋಟ 
ಎಂದೊ ಮೆಚ್ಚಿದ್ದ ಕಂಪಿನ ಕಾಟ 
ಆ ಸವಿಯನ್ನ ಅಳಿಸಲೇತಕೆ ನಾನು? 
ನೆನಪು ಮಧುರವಾಗಿದ್ದರೆ ತಪ್ಪೇನು? 

ನಾನು ನನ್ನನಳಾಗೇ ಇರುತ್ತೇನೆ 
ನಿನ್ನೊಡನೆ ಬಾಳ ಹಂಚುತ್ತೇನೆ 
ಗುಟ್ಟುಗಳನೆಲ್ಲಾ ಬಿಡುವುದು ಬೇಡ 
ಸತ್ಯಕ್ಕೆ ಹಲವು ಮುಖ, ಕಗ್ಗಂಟು ನೋಡ 

ಪ್ರಶ್ನೆಗಳು ಹಾಗೇ ಇರಲಿ 
ಉತ್ತರ ಬಂದರೆ ಬರಲಿ 
ತಿಳಿಯಾಗಿ ಹರಿವ ಬದುಕಲಿ 
ಯಾಕೆ ಕದಡಲಿ ರಂಗೋಲಿ? 

ಎಲ್ಲ ಕಿಟಕಿಗಳಿಗೂ ಹೆಸರೇಕೆ ಇಡಲಿ 
ಕ್ಷಣ ಕಂಡು ಮತ್ತೆ ಮರೆವ ಜಗದಲಿ 
ಎಲ್ಲೋ ಶುರುವಾಗಿ, ಮತ್ತೆಲ್ಲೋ ಮುಗಿಯುವುದು 
ಇಲ್ಲೇ, ಇದೇ ಎಂಬ ಗುರಿ ಹಳೆತಾಗುವುದು 

ಭಾಶೇ 

No comments: