ಎದೆಯಲಿ ಹಾಲೇ ಇರದಿದ್ದರೂ,
ಕಣ್ಣಲಿ ನೀರೇ ಬರದಿದ್ದರೂ
ಒಣಗಿ ಕಟ್ಟಿಗೆಯೇ ಆದರೂ
ಒಳಗಿರುವುದು ಹೆಣ್ಣೇ ತಾನೇ?
ಹೆತ್ತಪ್ಪನೇ ಅತ್ಯಾಚಾರವೆಸಗಿದ್ದರೂ
ಒಡಹುಟ್ಟಿದವರೇ ಮಾರಿ ಸಾಗಿಸಿದ್ದರೂ
ಗಂಡನೇ ತಲೆಹಿಡುಕನಾದರೂ
ಮಕ್ಕಳ ಕಣ್ಣಲ್ಲೇ ಸೂಳೆಯಾದರೂ
ಒಳಗಿರುವುದು ಹೆಣ್ಣೇ ತಾನೇ?
ಆಸೆಗಳೆಲ್ಲವನೂ ಅದುಮಿಟ್ಟು
ಬಾಳಿನ ಸುಖಗಳಿಗೆ ಬೆಂಕಿ ಕೊಟ್ಟು
ಮುಗಿಯದ ಬದುಕಿಗೆ ಸಮಾಧಿ ಕಟ್ಟಿ
ಸಮಾಧಿ ಮೇಲೇ ಗಿಡ ಬೆಳೆದು ಹೂ ಬಿಟ್ಟರೆ
ಒಳಗಿರುವುದು ಖಂಡಿತಾ ಹೆಣ್ಣು
ಭಾಶೇ
No comments:
Post a Comment