ಕರೆದಾಗ ನಿನ್ನ ಹಾಸಿಗೆಗೆ ಬಂದು
ನಿನ್ನಣತಿಯಂತೆ ಬೆತ್ತಲೆ ನಿಂದು
ನಿನ್ನ ಕಾಮನೆಗಳಲ್ಲಿ ನೆಂದು
ಮುಗಿಯದು ನಿನ್ನ ಆಸೆ, ಎಂದೂ
ಮಾತುಗಳ ಹಿಂದೆ ಹುದಗಬೇಡ
ಬುಧ್ಧಿವಂತಿಕೆಯಲಿ ನುಣುಚಬೇಡ
ಎಲ್ಲಿ, ಹೇಗೆ ಶುರವಾದರೂ
ನಿನ್ನ ಲಿಂಗದಲೇ ನಿಂತಿತು ನೋಡಾ,
ನಮ್ಮ ಎಲ್ಲಾ ಹೊಂದಾಣಿಕೆ
ನಿನ್ನ ತಕ್ಕಡಿಯಲ್ಲಿ ಬೆಲೆಯೆಷ್ಟು ನನಗೆ?
ನನಗೆ ಮಾನವಿದೆಯೇ, ಕೊನೆಗೆ?
ನಾನೇನಾದರೂ ಅರ್ಹಳೇ ಭಾವನೆಗೆ?
ಪ್ರೀತಿಗಲ್ಲದಿದ್ದರೂ, ಅನುಕಂಪಕ್ಕೆ
ಮುದುರಿದೆ, ನನ್ನ ಮನಸೇಕೆ?
ನಾನೂ ಒಬ್ಬ ಗೆಳೆತಿ
ಮಗಳು, ತಾಯಿ, ಒಡತಿ
ಇದೆ ವಿದ್ಯೆ, ಬುದ್ಧಿ, ಘನತೆ
ನಿನ್ನನ್ನ ತಾಳಿಕೊಳ್ಳುವ ಶಕ್ತಿ
ಕಾಮಾಲೆ ನಿನ್ನ ಕಣ್ಣಲ್ಲಿ, ದೇವರೇ ಗತಿ
ಭಾಶೇ
No comments:
Post a Comment