ಜೀವನದಿ ಸತ್ಯವನು ಸುಳ್ಳೆಂದು ತಿಳಿದು
ಸುಳ್ಳನ್ನು ನಿತ್ಯ ಸತ್ಯವೆಂದು ನಂಬಿ
ನೋಡುತ್ತ ಕೂತಿದ್ದೆ ಮಂಕಾಗಿ
ಜೀವನವ ಅರಿಯದೆ ಕಂಗಾಲಾಗಿ
ಭಾವನೆಗಳೇಕೆ ಅರ್ಥವಾಗೋಲ್ಲ
ತಪ್ಪು ತಿಳುವಳಿಕೆಗಳೇಕೆ ಸಾಮಾನ್ಯ
ಎಂಬುದು ಅರಿಯದೆ ಕಗ್ಗಂಟಾಗಿ
ಬಿಡಿಸಲಾಗದೆ ಕೂತೆ ನಿರಾಶಳಾಗಿ
ಸತ್ಯವ ನನಗೆ ತೋರಿಸಿಕೊಟ್ಟ
ಮನದ ಮಿಥ್ಯೆಯ ತೊಲಗಿಸಿಬಿಟ್ಟ
ಜೀವನದ ಆಶಾರೇಖೆಯ ಕಾಣಿಸಿಕೊಟ್ಟ
ಆ ಗುರುವಿಗೆ ವಂದನೆ, ಅಭಿನಂದನೆ
ನಾ ಮಾಡಿದಾ ತಪ್ಪ ತಿದ್ದಿದರು
ಜೀವನದ ದಾರಿಯ ತೋರಿಸಿದರು
ಕಗ್ಗಂಟ ಬಿಡಿಸಲು ನೆರವಾದರು
ಚಿಂತೆಯ ಮೂಲವ ತಿಳಿಸಿದರು
ನನ್ನ ಬದುಕ ಆವರಿಸಿದ್ದ ಮಾಯೆ
ನಿನ್ನ ಪ್ರಭಾವದಿ ನನಾಗಿದ್ದೆ ಕಾಯೆ,
ಇನ್ನು ಮನವಾಗಲಿದೆ ಪಕ್ವ
ಯಾಕೆಂದರೆ ಕಂಡಿದೆ ಅರಿವ ಛಾಯೆ
ಭಾಶೇ
Chaya, I hope you are doing well wherever you are! :D
No comments:
Post a Comment