ಏಟಿನ ನೋವು, ರಕ್ತದ ಕಲೆ
ಮುಚ್ಚಿಡುತ್ತೇನೆ ಜಗದಿಂದ
ಸುತ್ತಿ ಬಟ್ಟೆ ಹತ್ತಿಯಿಂದ
ನೋವುಣಿಸಿದವಗೆ ಕುತೂಹಲ
ಹುಡುಕುತ್ತಾನೆ ಎಡ, ಬಲ,
ಗಾಯವ ಚೂರೇ ಕೆದಕಿ
ನೀಲಿಯ ಒಂದಷ್ಟು ಅಮುಕಿ
ಹಲ್ಲು ಕಚ್ಚುತ್ತೇನೆ
ಅಳುವ ನುಂಗುತ್ತೇನೆ
ಬಣ್ಣ ಹಚ್ಚಿ ಮುಲಾಮು ತೀಡಿ
ಒಡೆದ ತುಟಿಗಳಿಗೆ ನಗುವ ನೀಡಿ
ಮಾಯುತ್ತಿರುವುದು ಮತ್ತೆ ಬಾತು
ವ್ರಣವಾಗಿ ಉಳಿಸಿ ಗುರುತು
ಪುನರಾವರ್ತನೆಗೆ ಕಾಯುತ್ತೇನೆ
ಒಳಗೇ ಬಿಡಿಸಿಕೊಳ್ಳಲು ಹೆಣಗುತ್ತೇನೆ
ಭಾಶೇ
No comments:
Post a Comment