Saturday, July 6, 2024

ಕಾಯುವುದು

ಕಾಯುವುದು ಅಷ್ಟು ಸುಲಭವಲ್ಲ 
ಈ ಅಂತರ್ಜಾಲದ ಕಿಂಡಿಗಳ ಕಾಲದಲ್ಲಿ 
ತಕ್ಷಣ ಸಿಗುವ ಸಂತೋಷಗಳಲ್ಲಿ 
ಕಾಯುವಿಕೆಯ ಸವಿ ಕಳೆದುಹೋಗಿದೆ 

ತನು, ಮನ, ಕೆಂಪಾಗಿ ಉರಿದು 
ಮಳೆಗೆ ಕಾಯುವ ಮರದಂತೆ 
ಹಸಿರು ಕಾಯ ಗುರುತುಮಾಡಿ
ಹಳದಿ ಹಣ್ಣಾಗಲು ಕಾದಂತೆ 

ಕಾಯುವುದೇ ಜಪವಾಗಿ, ಗುರಿಯಾಗಿ 
ಧ್ಯಾನವಾಗಿ, ಅದೊಂದೇ ಮುಖ್ಯವಾಗಿ 
ಬೇರೆಲ್ಲಾ ನಗಣ್ಯವಾಗಿ 
ಆಗಮನವೇ ಮೋಕ್ಷದ ಬಾಗಿಲಾಗುವಂತೆ 

ಬಯಸಿದ ತಕ್ಷಣ ದೊರೆವಾಗ 
ಒಬ್ಬರಲ್ಲದಿದ್ದರೆ ಇನ್ನೊಬ್ಬರು ಇರುವಾಗ 
ಮನಸು ಚಂಚಲವಾಗಿ, ಸುಖ ಕ್ಷಣಿಕವಾಗಿರುವಾಗ 
ಕಾಯುವಿಕೆಯ ಭಾಗ್ಯ ಕಳೆದುಹೋಗಿದೆ 

ಭಾಶೇ 

No comments: