ಬದುಕಲಿ ಬೆಂದು
ಇದು ಸಾಕೆಂದು
ಮುಕ್ತಿ ಮಾರ್ಗವಾಗಿ ಸಂದು
ಹೋಗಿರುವುದೆಂದು
ಸಾರುವ ಬೆಂಕಿ
ಬಳಗಿರುವವರ ಎದೆಯಲ್ಲೂ ಬೆಂಕಿ
ಯಾವುದೋ ಮುಗಿಯದ ಮಾತು
ಎಲ್ಲೋ ಬೇಕಿತ್ತು ಸಾಥು
ದೇಹ ಬಂದಾಗಿ
ಶಕ್ತಿ ನಂದಿಹೋಗಿ
ಪ್ರಾಣ ಹಾರಿ
ಮನುಷ್ಯ ಹೆಣವಾಗಿ
ಇನ್ನೂ ಬೇಕಾಗಿದ್ದರೂ
ಕಥೆ ಮುಗಿದುಹೋಗಿ
ಹೇಳಿ ಪೂರೈಸಲಾಗುವುದಿಲ್ಲ
ಬೋಳಾದ ತಲೆ
ಊದಿದ ಕಣ್ಣುಗಳು
ಸೋರುವ ಮೂಗು
ಖಾಲಿ ಎದೆ
ಗಂಟಲಲ್ಲಿ ದುಃಖ
ಬದಲಾದ ಹಣೆಬೊಟ್ಟಿನ ಬಣ್ಣ
ಸಾವಿಗೆ ವಿವರಣೆಯಿಲ್ಲ
ಹೆದರಿಕೆಯಿಲ್ಲ
ಸಮಯವಿಲ್ಲ
ಉತ್ತರವಿಲ್ಲ
ಸಾವು ಸಾವಲ್ಲದೆ
ಇನ್ನೇನೂ ಅಲ್ಲ
ಕಳೆದುಕೊಂಡವರ
ಉಳಿದು ಹೋದವರ
ಬದುಕು ಇರುವವರ
ನೋವು, ಸಂಕಟಕ್ಕೆ
ಪರಿಹಾರವಿದೆಯೇ
ಗೊತ್ತಿಲ್ಲ
ಭಾಶೇ
No comments:
Post a Comment